ETV Bharat / state

ಬಸವಕಲ್ಯಾಣ: ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

author img

By

Published : Sep 9, 2020, 10:21 AM IST

ಬಸವಕಲ್ಯಾಣ ತಾಲೂಕು ಲೋಕ ಶಿಕ್ಷಣ ಸಮಿತಿ ವತಿಯಿಂದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ನಿಮಿತ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಆಚರಣೆ
ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಆಚರಣೆ

ಬಸವಕಲ್ಯಾಣ: ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನ ಸಿಗಬೇಕಾದರೆ ಮೊದಲು ಶಿಕ್ಷಣ ಪಡೆಯಬೇಕು ಎಂದು ತಾ.ಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ ಹೇಳಿದರು.

ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ನಿಮಿತ್ತ ತಾಲೂಕು ಲೋಕ ಶಿಕ್ಷಣ ಸಮಿತಿಯಿಂದ ತಾ.ಪಂ ನಲ್ಲಿ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಹಿಳೆಯರು ಸಾಕ್ಷರರಾದರೆ ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.

ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಾಕ್ಷರತೆ ಅತ್ಯವಶ್ಯಕವಾಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಪುರುಷರಿಗೆ ಸರಿಸಮವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರೂ ಅನಕ್ಷರತೆಯ ಪ್ರಮಾಣದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮಹಿಳಾ ಸಾಕ್ಷರತೆಗೆ ಹೆಚ್ಚಿನ ಒತ್ತು ನೀಡಿ ಈ ಅಂತರವನ್ನು ಕಡಿಮೆ ಮಾಡಬೇಕು ಎಂದು ಕರೆ ನೀಡಿದರು.

ಈ ವೇಳೆ ಜಿ.ಪಂ ಮಾಜಿ ಅಧ್ಯಕ್ಷ ನೀಲಕಂಠ ರಾಠೋಡ, ಪ್ರಮುಖರಾದ ರಾಜಶೇಖರ, ಸಂತೋಷ ಚವ್ಹಾಣ, ಸುಭಾಷ ಕಟ್ಟಿಮನಿ, ಮಹಿಪಾಲರೆಡ್ಡಿ ಶೇರಿಕಾರ, ಸೂರ್ಯಕಾಂತ ಬೇಲೂರೆ, ಮೇಲ್ವಿಚಾರಕ ಶಿವಕುಮಾರ ಬಿರಾದಾರ, ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಶ್ರೀಶೈಲ ಕಾಚಾಪೂರ, ಅಲ್ಪ ಸಂಖ್ಯಾತ ಇಲಾಖೆ ಅಧಿಕಾರಿ ಸವಿತಾ, ಜೆಸ್ಕಾಂ ಜೆಇ ಶಿವರಾಜ ಚಪಾತೆ, ತಾಲೂಕು ಸಂಯೋಜಕಿ ಲಕ್ಷ್ಮೀ, ದಾನಪ್ಪಾನೋರ, ವಿಜಯಕುಮಾರ ಜಮಾದಾರ, ದಶರಥ ಜಾಧವ, ಪ್ರೇರಕರು ಕಲಾವಿದರು ಹಾಗೂ ಬೋಧಕರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.