ETV Bharat / state

ಬೀದರ್‌ ಕಾದ್‌ ಬೆಂಕಿಯಾಗೈತಿ.. ಒಂದ್‌ಹೋಗಿ ಹನ್ನೊಂದಾಗಾಬಾರ್ದ್‌ ಅಲ್ವೇನ್ರೀ! - undefined

ಯಪ್ಪಾ ಯಪ್ಪಾ ಹಿಂದ್ಕ್‌ ಯಾವತ್ತೂ ಇಷ್ಟೊಂದ್‌ ಬಿಸಿಲಿನ್ಯಾವತ್ತೂ ನಾವ್‌ ನೋಡಿದ್ದೇ ಇಲ್‌ಬಿಡ್ರೀ.. ಅದೇನ್‌ ಬಿಸಿಲಂತೇನಿ, ನೆತ್ತಿ ಸುಡೋದಷ್ಟ ಅಲ್ರೀ, ಭೂಮಿ ಕಾದು ಕೆಂಡ್‌ದಂಗಾಗೈತಿ ನೋಡ್ರೀ ಅಂತಾ ಬೀದರ್‌ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಇಂತಹ ಟೈಮ್‌ನ್ಯಾಗ್‌ ಮಕ್ಕಳ ಅದೆಂಗರಾ ಶಾಲೆಗೆ ಹೋದಾರು ಅನ್ನೋದೇ ಅವರ ಪ್ರಶ್ನೆ..

ಬಿಸಿಲಿನ ತಾಪಕ್ಕೆ ಬೆಂದ ಬೀದರ್ ಜನ
author img

By

Published : Jun 12, 2019, 11:40 AM IST

Updated : Jun 12, 2019, 1:24 PM IST

ಬೀದರ್​​​: ದೊಡ್ಡೋರಾದ್ರಾ ತಲೆ ಮ್ಯಾಲೆ ಕರ್ಚೀಫ್ ಹಾಕ್ಕೊಳ್ತಾರ್‌, ಹಳ್ಯಾನ್‌ ಮಂದಿಯಾದ್ರೇ ಟವಲ್‌ ಸುತ್ಕೋತಾರ್‌.. ಹೆಣ್ಮಕ್ಕಳಾದ್ರೇ ತಲೆ ಮ್ಯಾಲೆ ಶರಗಂತೂ ಇದ್ದಾ ಇರ್ತೈತಿ.. ಆದ್ರೇ, ಈ ಸಣ್ಣ್ ಸಣ್ಣ್ ಮಕ್ಕಳ್‌ ಪಾಡೇನ್‌ರೀ ಅಂತೀನಿ..

ಹೌದು, ಯದ್ವಾಯದ್ವಾ ಬಿಸಿಲಿನಿಂದಾಗಿ ಬೀದರ್‌ ಜನರ ಬಾಯೊಳಗೆ ಇದೇ ಮಾತು ಕೇಳಿ ಬರ್ತಿವೆ. ಇಂತಹ ಬಿಸಿಲಿನ್ಯಾಗ್‌ ಶಾಲೆಗೆ ಹೋಗೋ ಮಕ್ಕಳ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ಅಲಿಯುತ್ತಿವೆ. ಇದೇ ಬಿಸಿಲಿನ ಕಾರಣಕ್ಕೆ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ 15 ದಿನ ಶಾಲೆ ಲೇಟಾಗಿ ಶುರುವಾಗ್ತಿದೆ. ಸರ್ಕಾರ ಈ ಎರಡೂ ಜಿಲ್ಲೆಗಳ ಮಕ್ಕಳ ಬಗೆಗಿನ ಕಾಳಜಿಯನ್ನ ಬೀದರ್‌ ಮಕ್ಕಳ ಬಗ್ಗೆ ತೋರಿಸಿಲ್ಲ ಅನ್ನೋದು ಇಲ್ಲಿ ಸ್ಪಷ್ಟ. ಯಾಕಂದ್ರೇ, ಬೀದರ್‌ ಕೂಡ ಈಗೀಗ 42 ರಿಂ 43 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿದೆ.

ಬಿಸಿಲಿನ ತಾಪಕ್ಕೆ ಬೆಂದ ಬೀದರ್ ಜನ

ಬಿಸಿಲೇನೋ ಭಯಂಕರವಾಗೈತಿ. ಆದರೆ, ಮಕ್ಕಳ ಹುರುಪು ಎಳ್ಳಷ್ಟೂ ಕಡಿಮೆ ಆಗಿಲ್ರೀ.. ಹೊಸ ಬಟ್ಟೆ, ಪುಸ್ತಕ, ಬ್ಯಾಗ್ ಹಾಕ್ಕೊಂಡು ಮಕ್ಕಳೇನೋ ಶಾಲೆಗೆ ಹೊಂಟಾವು. ಸೂರ್ಯನ ಹೊಡೆತಕ್ಕೆ ತಾಳಲಾರದೇ ಅಸ್ವಸ್ಥರಾಗ್ತಿದ್ದಾರೆ ಮಕ್ಕಳು. ಅದಕ್ಕಾಗಿ ಜೂನ್‌ 14ರಿಂದ ಶಾಲೆಗಳು ಪ್ರಾರಂಭವಾದ್ರೇ ಒಳ್ಳೇದು ಅಂತಿದ್ದಾರೆ ಸ್ಥಳೀಯರು. ಯಾಕಂದ್ರೇ, ಈಗಾಗಲೇ ಸರ್ಕಾರ ಇದೇ ದಿನಾಂಕದಿಂದಲೇ ಯಾದಗಿರಿ ಮತ್ತು ಕಲಬುರ್ಗಿಯಲ್ಲಿ ಶಾಲೆಗಳು ಆರಂಭವಾಗಲಿ ಅಂತಾ ಆದೇಶ ಹೊರಡಿಸಿದೆ. ಅದೇ ರೀತಿ ಇಲ್ಲೂ ಶಾಲೆ ಲೇಟಾಗಿ ಶುರುವಾಗಬೇಕಿದೆ. ಯಾಕಂದ್ರೇ, ಶಾಲೆಯಲ್ಲಿ ಕೂರಲಾಗದೇ ಮಕ್ಕಳು ಬೆವರುತ್ತಿವೆ. ಮೂಗಿನಿಂದ ರಕ್ತ ಸೋರುವುದು, ಚರ್ಮ ರೋಗ ಸೇರಿ ಉದರ ಸಂಬಂಧಿ ರೋಗಗಳೂ ಮಕ್ಕಳಿಗೆ ವಕ್ಕರಿಸುತ್ತಿವೆ. ಇದಕ್ಕೆಲ್ಲ ಉಷ್ಣಾಂಶವೇ ಕಾರಣ ಅಂತಿದ್ದಾರೆ ವೈದರು.

ಬೀದರ್‌ ಜಿಲ್ಲೆ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮೊದಲೇ ಸರ್ಕಾರದ ಗಮನಕ್ಕೆ ತರದೇ ಇರುವುದು ಇಲ್ಲಿ ಸ್ಪಷ್ಟ. ಇನ್ನಾದರೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಬಿಸಿಲಿನಿಂದಾಗುವ ಅನಾಹುತಗಳನ್ನ ತಪ್ಪಿಸಬೇಕಿದೆ.

Intro:ಬಿಸಿಲಿನ ತಾಪಕ್ಕೆ ಬೆಂದು ಹೊದ ಬೀದರ್ ಜನ, ಯಾದಗಿರಿ, ಕಲ್ಬುರ್ಗಿ ಜಿಲ್ಲೆ ಶಾಲೆಗಳಿಗೆ ವಿನಾಯತಿ...!

ಬೀದರ್:
ಭಯಂಕರ ಬಿಸಿಲಿನ ತಾಪಕ್ಕೆ ಬಿಸಿಲು ನಾಡು ಬೀದರ ಜನರು ಬೆಂದು ಹೊಗಿದ್ದು ಮಳೆಗಾಲದ ಮಾನ್ಸೂನ್ ಆರಂಭವಾದರು ಕೆಂಡ ಕಾರುವುದು ನಿಲ್ಲಿಸ್ತಿಲ್ಲ ಸೂರ್ಯ. ಸುಡು ಬಿಸಿಲಿನ ಧಗೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಸಧ್ಯ ಪ್ರಮುಖವಾಗಿ ಶಾಲೆಗಳಿಗೆ ಹೊಗುವ ಮಕ್ಕಳು ಬಿಸಿಲಿನ ಹೊಡೆತಕ್ಕೆ ಆಸ್ಪತ್ರೆ ಪಾಲಾಗ್ತಿದ್ದು ಸರ್ಕಾರ ಯಾದಗಿರಿ ಹಾಗೂ ಕಲ್ಬುರ್ಗಿ ಜಿಲ್ಲೆಯ ಶೈಕ್ಷಣಿಕ ಆರಂಭೊತ್ಸವಕ್ಕೆ 15 ದಿನಗಳ ವಿನಾಯತಿ ನೀಡಿದೆ ಆದರೆ ಬಿಸಿಲಿನಲ್ಲೆ ಬಳಲುತ್ತಿರುವ ಬೀದರ್ ಜಿಲ್ಲೆಯನ್ನು ಮರೆತು ಬಿಟ್ಟಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

ವೈ.ಓ:
ಅಬ್ಬಾ... ಶಾಲೆ ಆರಂಭವಾಯ್ತು ಎಂದು ಹೊಸ ಹುರುಪಿನಲ್ಲಿ ಹೊಸ ಬಟ್ಟೆ ಪುಸ್ತಕ, ಬ್ಯಾಗ್ ಹಾಕ್ಕೊಂಡು ಸಾಲು ಸಾಲಾಗಿ ವಿಧ್ಯಾರ್ಥಿಗಳು ಶಾಲೆಗೆ ಹೊಗಲು ಉತ್ಸುಕರಾಗಿದ್ದಾರೆ. ಆದ್ರೆ ಬಿರೂ ಬಿಸಿಲಿನ ಧಗೆ ಯಮನಂತೆ ಕಾಡ್ತಿದ್ದು ಇಲ್ಲಿ ಪ್ರತಿ ದಿನ 40 ಡಿಗ್ರಿ ಸೆಲ್ಸಿಯಸ್ ಗೂ ಮೀರಿ ಹೊರ ಹಾಕ್ತಿರುವ ಸೂರ್ಯನ ಪ್ರಖರ ತಾಪಮಾನಕ್ಕೆ ಜನ ಜೀವನ ಅಸ್ತವ್ಯಸ್ತವಾಗಿ. ಶಾಲೆಗೆ ಹೊದ ಅದೆಷ್ಟೊ ವಿಧ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಪಾಲಾಗಿದ್ದಾರೆ. ಸರ್ಕಾರ ಮಾತ್ರ ಭಾರಿ ಬಿಸಿಲು ಹಿನ್ನಲ್ಲೆಯಲ್ಲಿ ಹೈದ್ರಾಬಾದ ಕರ್ನಾಟಕ ಭಾಗದ ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಮಾತ್ರ ಮೇ 29ಕ್ಕೆ ಆರಂಭವಾಗಬೇಕಾದ ಶಾಲೆಗಳನ್ನ ಜೂನ್ 14 ರಿಂದ ಪ್ರಾರಂಭಿಸಬೇಕೆಂದು ಎರಡೂ ವಾರಗಳ ಕಾಲ ಶಾಲಾ ಪ್ರಾರಂಭವನ್ನ ಮುಂದೂಡಿದ್ದಾರೆ, ಆದರೆ ಇದೇ ಹೈದ್ರಾಬಾದ ಕರ್ನಾಟಕ ಭಾಗದ ಬೀದರ್, ಕೊಪ್ಪಳ, ಬಳ್ಳಾರಿ, ರಾಯಚೂರು,ಜಿಲ್ಲೆಗಳಲ್ಲಿ ಕೂಡ ಭಾರಿ ಬಿಸಿಲಿದ್ದು, ಜನ ಮಧ್ಯಾಹ್ನ 12ರಿಂದ ಸಂಜೆ 06 ಗಂಟೆಯ ವರೆಗೆ ಮನೆಯಿಂದ ಯಾರು ಹೊರ ಬರುತ್ತಿಲ್ಲ ಅಷ್ಟರ ಮಟ್ಟಿಗೆ ಭಾರಿ ಬಿಸಿಲು ಇದ್ದರು ಕೂಡ ಯಾಕೆ ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಕಾಣುತ್ತಿಲ್ಲವೇ ಎನ್ನುತ್ತಿದ್ದಾರೆ ಈ ಭಾಗದ ಸಾರ್ವಜನಿಕರು. ಬೀದರ್ ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಜಿಲ್ಲೆಯಲ್ಲಿ ಮೇ 29ರಿಂದ ಆರಂಭಗೊಂಡಿದ್ದು ,ಇದರಿಂದ ಮಕ್ಕಳು ಬಿಸಿಲಿಗೆ ತತ್ತರಿಸಿ ಹೊಗಿದ್ದಾರೆ. ಭಾರಿ ಬಿಸಿಲಿನಿಂದ ಶಾಲೆಯ ಕೋಣೆಯಲ್ಲಿ ಕುಳಿತುಕೊಳುವದಕ್ಕೆ ಆಗುತ್ತಿಲ್ಲ, ಇಡೀ ದೇಹವನ್ನ ಬೇವರ ನೀರಿನಿಂದ ತೋಯಿದು ಹೋಗುತ್ತಿದೆ, ಜೋತೆಗೆ ಮೂಗಿನಿಂದ ರಕ್ತ ಬರುತ್ತಿದೆ,ಇನ್ನೂ ಎಷ್ಟೋ ಮಕ್ಕಳಿಗೆ ಚರ್ಮ ರೋಗ ಹೀಗೆ ನಾನಾ ರೋಗಗಳು ಮಕ್ಕಳಿಗೆ ಬರುತ್ತಿವೆ, ಸರ್ಕಾರ ತಕ್ಷಣವೇ ಇನ್ನೂ ಎರಡೂ ವಾರ ಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಬೇಕು ಎನ್ನುತ್ತಿದ್ದಾರೆ ಪೋಷಕರು.

ಬೈಟ್-01: ಮಾಣಿಕೇಶ ಪಾಟೀಲ್- ಸ್ಥಳೀಯರು

ವೈ.ಓ:
ಇನ್ನೂ ಪ್ರತಿ ದಿನ ದಾಖಲಾಗುತ್ತಿರುವ 40ರಿಂದ 42,43 ಬಿಸಿಲು ಉಷ್ಣಾಂಶ ದಿಂದ ಮಕ್ಕಳಿಗೆ ಯಾವ ರೋಗ ಬರುತ್ತವೇ ಎಂಬುವದರ ಕುರಿತು ಮಕ್ಕಳ ತಜ್ಜ ವೈದ್ಯರು ಹೇಳುವದು ಹೀಗೆ, ಒಂದಿಲ್ಲ ಎರಡಿಲ್ಲ ಬಿಸಿಲಿನಲ್ಲಿ ಮಕ್ಕಳಿಗೆ ಬಿಟ್ಟರೆ ನಾನಾ ಕಾಯಿಲೆಗಳು ಬರುತ್ತವೆ ವಾಂತಿ ಭೇದಿ,ಚರ್ಮ ರೋಗ, ಮೂಗಿನಿಂದ ರಕ್ತ ಹೀಗೆ ನಾನಾ ರೋಗಗಳಿಗೆ ಮಕ್ಕಳು ತುತ್ತಾಗುತ್ತಾರೆ ಎಂದು ಹೇಳುತ್ತಿದ್ದಾರೆ ವೈದ್ಯರು.

ಬೈಟ್-02: ಡಾ. ಅಮಿತ ಅಷ್ಟೂರೆ- ವೈಧ್ಯರು

ಬೈಟ್-03: ಡಾ. ಯುವರಾಜ್ ಜಾಧವ ಮಕ್ಕಳ ತಜ್ಞರು.

ವೈ.ಓ:
ಒಟ್ಟಿನಲ್ಲಿ ಸರ್ಕಾರ ಮತ್ತು ರಾಜ್ಯ ಶಿಕ್ಷಣ ಸಚಿವರು ತಕ್ಷಣವೇ ಒಂದು ಜಿಲ್ಲೆಗೆ ಒಂದು ನ್ಯಾಯಾ ಇನ್ನೊಂದು ಜಿಲ್ಲೆಗೆ ಮತ್ತೊಂದು ನ್ಯಾಯ ಎಂಬ ಮಾತು ಕೇಳಿ ಬಂದ್ರು. ಪ್ರಕೃತಿಯ ವಿಚಿತ್ರ ಪ್ರಖರತೆಯಿಂದ ಶಾಲೆಗೆ ಹೊಗಬೇಕಾದ ಮಕ್ಕಳು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರ್ತಿರುವುದಕ್ಕೆ ಮುಂಗಾರು ಮಳೆ ಬರುವವರೆಗೆ ಕಾಯಲೇಬೇಕು.

ಬ್ಯೂರೋ ರಿಫೊರ್ಟ್ ಈಟಿವಿ ಭಾರತ ಬೀದರ್.Body:AnilConclusion:Bidar
Last Updated : Jun 12, 2019, 1:24 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.