ಬೀದರ್: ತೆಲಂಗಾಣದಿಂದ ಅಕ್ರಮವಾಗಿ ರಾಜ್ಯದ ಗಡಿ ದಾಟಿ ಮಹಾರಾಷ್ಟ್ರದ ಮಹಾನಗರಗಳಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ದಂಧೆಕೋರನನ್ನು ಬಂಧಿಸುವಲ್ಲಿ ಭಾಲ್ಕಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತೆಲಂಗಾಣದ ಎಸಗಿ ಗ್ರಾಮದ ಸಂಜೀವಕುಮಾರ್ ಪಾಟೀಲ್ ಬಂಧಿತ ಆರೋಪಿ. ಈತ ಜಿಲ್ಲೆಯ ಔರಾದ್ ತಾಲೂಕಿನ ಸೊರಳ್ಳಿ-ವಡಗಾಂವ್ ಬಳಿ ಬೈಕ್ ಮೇಲೆ 2.5 ಕೆ.ಜಿ ಗಾಂಜಾ ಸಾಗಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಭಾಲ್ಕಿ ಡಿವೈಎಸ್ ಪಿ ದೇವರಾಜ್.ಬಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ಕುರಿತು ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಗಾಂಜಾ ಸಾಗಾಟ: ತೆಲಂಗಾಣ ಮೂಲದ ವ್ಯಕ್ತಿ ಅರೆಸ್ಟ್ - marijuana transfer : accused Arrest
ಔರಾದ್ ತಾಲೂಕಿನ ಸೊರಳ್ಳಿ-ವಡಗಾಂವ್ ಬಳಿ ಬೈಕ್ ಮೇಲೆ 2.5 ಕೆ.ಜಿ ಗಾಂಜಾ ಸಾಗಾಟ ಮಾಡುತ್ತಿದ್ದ ತೆಲಂಗಾಣ ಮೂಲದ ದಂಧೆಕೋರನನ್ನು ಪೊಲೀಸರು ಬಂಧಿಸಿದ್ದಾರೆ. ಸಂಜೀವಕುಮಾರ್ ಪಾಟೀಲ್ ಬಂಧಿತ ಆರೋಪಿ