ಬೀದರ್ : ಲಾಕ್ ಡೌನ್ನಿಂದಾಗಿ ಮದ್ಯದಂಗಡಿಗಳು ಬಂದ್ ಆದ ಹಿನ್ನೆಲೆ ಕಳ್ಳಭಟ್ಟಿ ಸಾರಾಯಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಖಂಡ್ರೆ ತಾಂಡದಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ ದಂಧೆ ನಡೆಯುತ್ತಿದ್ದು, ಮಾರುಕಟ್ಟೆಯಲ್ಲಿ ಮದ್ಯ ಸಿಗದೆ ಕಂಗಾಲಾದ ಮದ್ಯ ಪ್ರಿಯರು ದುಬಾರಿ ಬೆಲೆಗೆ ಕಳ್ಳಭಟ್ಟಿ ಸಾರಾಯಿ ಕೊಳ್ಳಳು ಬರುತ್ತಿದ್ದಾರೆ.
ಒಂದು ಲೀಟರ್ ಕಳ್ಳಭಟ್ಟಿ ಸಾರಾಯಿ 300 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ದಿನಕ್ಕೆ 15 ಲೀಟರ್ಗೂ ಅಧಿಕ ಕಳ್ಳಭಟ್ಟಿ ಮಾರಾಟವಾಗುತ್ತಿದೆ ಎನ್ನಲಾಗುತ್ತಿದೆ. ಕಳ್ಳಭಟ್ಟಿ ಸಾರಾಯಿ ಅಡ್ಡೆಗಳ ಮೇಲೆ ಅಬಕಾರಿ ಅಧಿಕಾರಿಗಳು ಸಾಲು ಸಾಲು ದಾಳಿ ನಡೆಸಿದರೂ ಅಕ್ರಮ ದಂಧೆಗಳು ಮಾತ್ರ ನಿಂತಿಲ್ಲ.