ಬಸವಕಲ್ಯಾಣ: ಹೋಟೆಲ್ಗೆ ನುಗ್ಗಿದ ಕಳ್ಳನೊಬ್ಬ ಕೈಗೆ ಸಿಕ್ಕಷ್ಟು ಕಾಸು ದೋಚಿ, ಹೋಟೆಲ್ನಲ್ಲಿಯೇ ಭರ್ಜರಿ ಊಟ ಮಾಡಿ ಹೋದ ಘಟನೆ ನಗರದ ಅಂಬೇಡ್ಕರ್ ವೃತ್ತದ ಸಮೀಪವಿರುವ ನಂದಿನಿ ಹೊಟೇಲ್(ರೆಸ್ಟೋರೆಂಟ್)ನಲ್ಲಿ ತಡರಾತ್ರಿ ನಡೆದಿದೆ.
ಈ ಹೋಟೆಲ್ನ ಹಿಂಭಾಗದ ಕಿಟಕಿ ಮೂಲಕ ಒಳ ನುಗ್ಗಿದ ಖದೀಮ, ಗಲ್ಲಾ ಪೆಟ್ಟಿಗೆಯಲ್ಲಿದ್ದ ಸುಮಾರು 3 ಸಾವಿರ ರೂಪಾಯಿ ಜೇಬಿಗೆ ಏರಿಸಿದ್ದಾನೆ. ನಂತರ ಅಲ್ಲಿಯೇ ಸಿದ್ಧಪಡಿಸಿದ್ದ ಅಡುಗೆಯ ರುಚಿಯನ್ನು ಸವಿದಿದ್ದಾನೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಈ ಹೋಟೆಲ್‌ನಲ್ಲಿ ಕೆಲಸ ಮಾಡುವ ಯುವಕರು ಮಹಡಿ ಮೇಲೆ ಮಲಗಿದ್ದರು ಎನ್ನಲಾಗುತ್ತಿದೆ. ಬೆಳಗ್ಗೆ ಹೋಟೆಲ್ ಬಾಗಿಲು ತೆರೆಯುತ್ತಿದ್ದಂತೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳತನ ಮಾಡಿರುವ ಮೊತ್ತ ಕಡಿಮೆ ಇರುವ ಕಾರಣ ಹೋಟೆಲ್ ಮಾಲೀಕರು ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.