ETV Bharat / state

ಬೀದರ್​ನಲ್ಲಿ ಸತತ ಮಳೆ: ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ - Bidar rain news

ಕಳೆದ ಕೆಲ ದಿನಗಳಿಂದ ಬಿಡುವಿ ನೀಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೀದರ್​ನಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಸ್ಥಳಿಯ ನಿವಾಸಿಗರು ಬದುಕು ಬೀದಿಗೆ ಬಂದಿದೆ.

ಜನಜೀವನ
author img

By

Published : Nov 2, 2019, 12:48 PM IST

ಬೀದರ್: ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಜಿಲ್ಲೆಯ ಔರಾದ್ ಪಟ್ಟಣದ ವಾರ್ಡ್ ನಂಬರ್ 8ರಲ್ಲಿ ಮಳೆ ನೀರು ಸೇರಿದಂತೆ ಚರಂಡಿ ನೀರು ಕೂಡ ನಿವಾಸಿಗರ ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಮಾಡಿದೆ. ದಿನ ಬಳಕೆ ವಸ್ತುಗಳು ನೀರು ಪಾಲಾಗಿದ್ದು, ಕಳೆದ ಎರಡು ದಿನಗಳಿಂದ ಮನೆಯನ್ನು ಬಿಟ್ಟು ನಿವಾಸಿಗರು ಬೀದಿಗೆ ಬಂದಿದ್ದಾರೆ.

ಗಬ್ಬು ನಾರುವ ವಾಸನೆಯಿಂದ ಕಂಗೆಟ್ಟು ಹೋಗಿರುವ ಸ್ಥಳೀಯರು ತಕ್ಷಣ ಸ್ವಚ್ಛತೆ ಕಾರ್ಯ ಮಾಡುವಂತೆ ಪಟ್ಟಣ ಪಂಚಾಯತ್​ ಅಧಿಕಾರಿಗಳಿಗ ಮನವಿ ಮಾಡಿದ್ದಾರೆ. ಸದ್ಯಕ್ಕೆ ಮನೆಗಳಲ್ಲಿ ತುಂಬಿರುವ ನೀರನ್ನು ಮೊಟಾರ್​ಗಳ ಮೂಲಕ ಹೊರತೆಗೆಯುವ ಕೆಲಸ ನಡೆಯುತ್ತಿದೆ. ಮಳೆ ಅವಾಂತರದಿಂದ ಹಾನಿಯಾಗಿರುವುದಕ್ಕೆ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Intro:ಸತತ ಮಳೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ...!

ಬೀದರ್:
ಕಳೇದ ಒಂದು ವಾರದಿಂದ ಎಡೆಬಿಡದೆ ಸುತಿತ್ತಿರುವ ಸತತ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಮಾಡಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಜಿಲ್ಲೆಯ ಔರಾದ್ ಪಟ್ಟಣದ ವಾರ್ಡ್ ನಂಬರ್ 8 ರಲ್ಲಿ ಚರಂಡಿ ನೀರು ಸೇರಿದಂತೆ ಮಳೆ ನೀರು ಕೂಡ ನಿವಾಸಿಗರ ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಮಾಡಿದೆ. ದಿನ ಬಳಕೆ ವಸ್ತುಗಳು ನೀರುಪಾಲಾದ್ರೆ. ಕಳೇದ ಎರಡು ದಿನಗಳಿಂದ ಮನೆಯನ್ನು ಬಿಟ್ಟು ನಿವಾಸಿಗರು ಬೀದಿಪಾಲಾಗಿದ್ದಾರೆ.

ಗಬ್ಬು ನಾರುವ ವಾಸನೆಯಿಂದ ಕಂಗ್ಗೆಟ್ಟು ಹೊಗಿರುವ ಸ್ಥಳೀಯರು ತಕ್ಷಣ ಸ್ವಚ್ಚತೆ ಕಾರ್ಯ ಮಾಡುವಂತೆ ಪಟ್ಟಣ ಪಂಚಾಯತ ಅಧಿಕಾರಿಗಳಿಗ ಮನವಿ ಮಾಡಿದ್ದಾರೆ. ಸಧ್ಯಕ್ಕೆ ಮನೆಗಳಲ್ಲಿ ತುಂಬಿರುವ ನೀರನ್ನು ಮೊಟಾರಗಳ ಮೂಲಕ ಹೊರ ತೆಗೆಯುವ ಕೆಲಸ ನಡೆಯುತ್ತಿದ್ದು. ಮಳೆ ಅವಾಂತರಕ್ಕೆ ಹಾನಿಯಾಗಿರುವುದಕ್ಕೆ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
---------+Body:ಅನೀಲConclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.