ETV Bharat / state

ಬಸವಕಲ್ಯಾಣ ತಾಲೂಕಿನಾದ್ಯಂತ ಉತ್ತಮ ಮಳೆ.. ಹಲವೆಡೆ ಅಂಗಡಿಗಳಿಗೆ ನುಗ್ಗಿದ ನೀರು

ಬಸ್ ನಿಲ್ದಾಣದ ಆವರಣದಲ್ಲಿ ನೀರು ಸಂಗ್ರಹಗೊಂಡಿದ್ದು, ಕೆಲಕಾಲ ಬಸ್​ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ರಸ್ತೆ ಬದಿಯಲ್ಲಿ ನೀರು ಸಂಗ್ರವಾಗಿ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರ ಕಾರ್ಮಿಕರ ತಂಡ, ನೀರು ತೆರವುಗೊಳಿಸಿದ್ದಾರೆ.

heavy rain in basavakalyana taluk
ಬಸವಕಲ್ಯಾಣ ತಾಲೂಕಿನಾದ್ಯಂತ ಉತ್ತಮ ಮಳೆ..ಹಲವೆಡೆ ಅಂಗಡಿಗಳಿಗೆ ನುಗ್ಗಿದ ನೀರು
author img

By

Published : Jun 29, 2020, 8:13 PM IST

ಬಸವಕಲ್ಯಾಣ (ಬೀದರ್​): ನಗರದಲ್ಲಿ ಉತ್ತಮ ಮಳೆಯಾಗಿದ್ದರ ಪರಿಣಾಮವಾಗಿ ವಿವಿಧ ಅಂಗಡಿಗಳಿಗೆ ನೀರು ನುಗ್ಗಿದೆ.

ಬಸವಕಲ್ಯಾಣ ತಾಲೂಕಿನಾದ್ಯಂತ ಉತ್ತಮ ಮಳೆ..

ನಗರದ ಬಸ್ ನಿಲ್ದಾಣ, ಲಾಲ್ ತಲಾಬ್ ಪ್ರದೇಶ, ಅಂಬೇಡ್ಕರ್ ವೃತ್ತ, ಲಕ್ಷ್ಮಿಕ್ರಾಸ್ ಸೇರಿ ಮುಖ್ಯರಸ್ತೆಯಲ್ಲಿಯ ಹಲವು ಅಂಗಡಿಗಳಿಗೆ ನೀರು ನುಗ್ಗಿ, ಹಾನಿ ಸಂಭವಿಸಿದೆ. ಬಸ್ ನಿಲ್ದಾಣದ ಆವರಣದಲ್ಲಿ ನೀರು ಸಂಗ್ರಹಗೊಂಡಿದ್ದು, ಕೆಲಕಾಲ ಬಸ್​ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ರಸ್ತೆ ಬದಿಯಲ್ಲಿ ನೀರು ಸಂಗ್ರವಾಗಿ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರ ಕಾರ್ಮಿಕರ ತಂಡ, ನೀರು ತೆರವುಗೊಳಿಸಿದ್ದಾರೆ.

ಹಲವಡೆ ನಿರ್ಮಾಣ ಮಾಡಲಾದ ಚರಂಡಿಗಳು ಕಸ, ಕಡ್ಡಿಗಳಿಂದ ಬ್ಲಾಕ್​ ಆಗಿದ್ದರಿಂದ ಅಂಗಡಿಗಳಿಗೆ ನೀರು ನುಗ್ಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಳೆ ನೀರು ಸುಗಮವಾಗಿ ಹರಿದು ಹೋಗಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇಂದು ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.