ETV Bharat / state

ವಿಮಾನ ಸಂಚಾರಕ್ಕೆ ಬೀದರ್​ನಲ್ಲಿ ಅದ್ಧೂರಿ ಸ್ವಾಗತ: ಮೊದಲ ಪ್ರಯಾಣ ಮಾಡಿದ ಸಿಎಂ ಯಡಿಯೂರಪ್ಪ - ಬೀದರ್​ನಲ್ಲಿ ವಿಮಾನ ನಿಲ್ದಾಣ

ಬೀದರ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನವನ್ನು ಟ್ರೂಜೆಟ್ ಸಿಬ್ಬಂದಿ ವಾಡಿಕೆಯಂತೆ ಎರಡು ಅಗ್ನಿಶಾಮಕ ದಳದ ವಾಹನಗಳಿಂದ ಬಾನೆತ್ತರದಲ್ಲಿ ನೀರು ಹಾರಿಸಿ ಭರ್ಜರಿಯಾಗಿ ಸ್ವಾಗತಿಸಿದರು.

ವಿಮಾನ ಸಂಚಾರಕ್ಕೆ ಬೀದರ್​ನಲ್ಲಿ ಅದ್ಧೂರಿ ಸ್ವಾಗತ

author img

By

Published : Feb 7, 2020, 7:06 PM IST

ಬೀದರ್: ಹೊಸ ವಿಮಾನಯಾನ ಆರಂಭವಾಗಿದ್ದು, ಇಂದು ಬೆಳಿಗ್ಗೆ ಬೆಂಗಳೂರಿನಿಂದ ಬೀದರ್​ಗೆ ಆಗಮಿಸಿದ ವಿಮಾನಕ್ಕೆ ಟ್ರೂಜೆಟ್ ಕಂಪನಿ ಸಿಬ್ಬಂದಿ ನೀರು ಹಾರಿಸಿ ಸ್ವಾಗತಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ನೂತನ ವಿಮಾನದಲ್ಲಿ ಪ್ರಯಾಣಿಸಿ ಬೀದರ್​ಗೆ ಆಗಮಿಸಿದರು. ಬೀದರ್ ವಾಯುನೆಲೆಗೆ ಬಂದ ವಿಮಾನವನ್ನು ಟ್ರೂಜೆಟ್ ಸಿಬ್ಬಂದಿ ವಾಡಿಕೆಯಂತೆ ಎರಡು ಅಗ್ನಿ ಶಾಮಕ ದಳದ ವಾಹನಗಳಿಂದ ಬಾನೆತ್ತರದಲ್ಲಿ ನೀರು ಹಾರಿಸಿ ವಿಮಾನಕ್ಕೆ ಭರ್ಜರಿಯಾಗಿ ಸ್ವಾಗತಿಸಿದರು.

ವಿಮಾನ ಸಂಚಾರಕ್ಕೆ ಬೀದರ್​ನಲ್ಲಿ ಅದ್ಧೂರಿ ಸ್ವಾಗತ

ಸಿಎಂ ಬಿ.ಎಸ್ ಯಡಿಯೂರಪ್ಪ ಆದಿಯಾಗಿ ಸುಮಾರು 72 ಜನ ಮೊದಲ ಪ್ರಯಾಣ ಬೆಳೆಸಿದ್ದು, ಈ ಮೂಲಕ ಟ್ರೂಜೆಟ್ ಕಂಪನಿಯೂ 24 ನೆಯ ಮಾರ್ಗದಲ್ಲಿ ತನ್ನ ಓಡಾಟ ಆರಂಭಿಸಿದೆ.

ಟ್ರೂ ಜೆಟ್‌ ತೆಲುಗು ಚಿತ್ರನಟ ರಾಮ್‌ ಚರಣ್‌ ಒಡೆತನಕ್ಕೆ ಸೇರಿದ ವಿಮಾನವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.