ETV Bharat / state

ಬಸವಕಲ್ಯಾಣದಲ್ಲಿ ಅಕ್ಕ ಮಹಾದೇವಿ ಕೈಗಾರಿಕಾ ಪಾರ್ಕ್ ಸ್ಥಾಪಿಸಿ: ಶೆಟ್ಟರ್ ಗೆ ಮಲ್ಲಿಕಾರ್ಜುನ ಖೂಬಾ ಮನವಿ - Former MLA Msllikarjun khubha

ಬಸವಕಲ್ಯಾಣದಲ್ಲಿ ಮಹಿಳಾ ವಾಣಿಜ್ಯೋದ್ಯಮ ಉದ್ಯಾನ ಸೇರಿದಂತೆ ವಿವಿಧ ಬೇಡಿಕೆಗಳಿದ್ದ ಪತ್ರವನ್ನು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಗೆ ಸಲ್ಲಿಸಿದರು.

Mallikarjuna khubha
Mallikarjuna khubha
author img

By

Published : Aug 31, 2020, 10:44 PM IST

ಬಸವಕಲ್ಯಾಣ: ವಿಶ್ವದ ಪ್ರಥಮ ಮಹಿಳಾ ಕವಿಯತ್ರಿ, ಶರಣೆ ಅಕ್ಕಮಹಾದೇವಿ ಹೆಸರಿನಲ್ಲಿ ವಿಶೇಷ ಮಹಿಳಾ ವಾಣಿಜ್ಯೋದ್ಯಮ ಉದ್ಯಾನವನ್ನು ಪಟ್ಟಣದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮನವಿ ಮಾಡಿದ್ದಾರೆ.

ಜಿಲ್ಲೆಗೆ ಭೇಟಿ ನೀಡಿದ ಸಚಿವ ಶೆಟ್ಟರ್ ಗೆ ಹುಮನಾಬಾದ್​ನಲ್ಲಿ ಭೇಟಿ ಮಾಡಿದ ಖೂಬಾ, ಈ ಕುರಿತು ಮನವಿ ಪತ್ರ ಸಲ್ಲಿಸಿದರು.

ಹೈದರಾಬಾದ್​ನಲ್ಲಿ ಮಹಿಳಾ ವಾಣಿಜ್ಯೋದ್ಯಮ ಉದ್ಯಾನ ಸ್ಥಾಪಿಸಿದ ಮಾದರಿಯಲ್ಲಿ ಕಲಬುರಗಿಯಲ್ಲಿ ಈಗ ಸ್ಥಾಪಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಬಸವಕಲ್ಯಾಣದಲ್ಲಿಯೂ ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

ಗುರು ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣ ನಗರವು ಈಗಿನ ಮತ್ತು 12ನೇ ಶತಮಾನದ ಮಹಿಳಾ ಕ್ರಾಂತಿಯ ಬೆಸುಗೆ ಹೊಂದಿದೆ. ಅನುಭವ ಮಂಟಪದ ಮೂಲಕ ಸಾಮಾಜಿಕ ಸಮಾನತೆ, ಕಾಯಕದ ಮಹತ್ವ ವಿಶ್ವಕ್ಕೆ ಸಾರಿದ ಸರ್ವ ಸಮಾನತೆಯ ಅರಿವು ಮೂಡಿಸಿದ ನೆಲ ಕಲ್ಯಾಣ. ಬಸವೇಶ್ವರರು, ಅಲ್ಲಮಪ್ರಭುಗಳು, ಸೇರಿದಂತೆ ಅನೇಕ ಶರಣರೊಂದಿಗೆ ಕಲ್ಯಾಣದ ಕ್ರಾಂತಿಯಲ್ಲಿ ತೊಡಗಿಸಿಕೊಂಡರವಲ್ಲಿ ಅಕ್ಕ ಮಹಾದೇವಿ ಅವರ ಪಾತ್ರ ಮಹತ್ವದ್ದು. ಹೀಗಾಗಿ ಅಕ್ಕ ಮಹಾದೇವಿ ಅವರ ಹೆಸರಿನಲ್ಲಿಯೇ ವಾಣಿಜ್ಯೋದ್ಯಮ ಉದ್ಯಾನವನ್ನು ಸ್ಥಾಪಿಸಬೇಕು ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಬಸವಕಲ್ಯಾಣವು ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗವನ್ನು ಹಂಚಿಕೊಂಡು ಹಿಂದುಳಿದ ಪ್ರದೇಶವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳಾ ನಿರುದ್ಯೋಗಿಗಳ ಹಿತದೃಷ್ಠಿ ಮತ್ತು ಈ ಭಾಗದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಮಹಿಳಾ ವಾಣಿಜ್ಯೋದ್ಯಮ ಪಾರ್ಕ್​ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಪ್ರಾರಂಭಿಸುವ ಕುರಿತು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಹೈದರಾಬಾದ್​ನಲ್ಲಿ 1994ರಲ್ಲಿ ಮಹಿಳಾ ವಾಣಿಜ್ಯೋದ್ಯಮ ಉದ್ಯಾನ ಸ್ಥಾಪಿಸಿ ಮಹಿಳಾ ಉದ್ಯೋಗಿಗಳಿಗೆ ಲಾಭದಾಯಕ ಉದ್ಯೋಗ ಕಲ್ಪಿಸಲಾಗಿದೆ. ಇದೇ ಮಾದರಿಯಲ್ಲಿ ಕಲಬುರಗಿ ನಗರದ ಹೊರ ವಲಯದ ಕೈಗಾರಿಕಾ ಪ್ರದೇಶದ 50 ಎಕರೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಸಹಕಾರದಿಂದ ಉದ್ಯಾನ ಸ್ಥಾಪನೆ ಮಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ಬಸವಕಲ್ಯಾಣದಲ್ಲಿ ಉದ್ಯಾನ ಸ್ಥಾಪಿಸಬೇಕು ಎಂದು ಖೂಬಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬಸವಕಲ್ಯಾಣದಲ್ಲಿ 5,000 ಕ್ಕೂ ಅಧಿಕ ಲಾರಿಗಳಿದ್ದು, ಇಲ್ಲಿ ವಿಜಯವಾಡ ರೀತಿಯಲ್ಲಿ ಹೊಸ ಆಟೋ ನಗರವನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.