ಬೀದರ್: ಕೊರೊನಾ ವೈರಸ್ಗೂ ಮಾಂಸದೂಟ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಧಾರಾಳವಾಗಿ ಮೊಟ್ಟೆ, ಚಿಕನ್, ಮಟನ್ ತಿನ್ನಿ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ.
ನಗರದ ಸಚಿವರ ಕಚೇರಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ವೈರಸ್ ಬಂದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ಸುಳ್ಳು ಅಪಪ್ರಚಾರ ಮಾಡಲಾಗ್ತಿದೆ. ಹೀಗಾಗಿ ಜನರು ಮಾಂಸಾಹಾರ ತಿನ್ನೋದನ್ನೇ ಬಿಟ್ಟುಬಿಟ್ಟಿದ್ದಾರೆ ಎಂದರು.
ಅಲ್ಲದೇ ಜಿಲ್ಲೆಯಾದ್ಯಂತ ಬಡವರಿಗೆ ಪ್ರತಿ ನಿತ್ಯ 10 ಸಾವಿರ ಲೀಟರ್ ಹಾಲು ಸರಬರಾಜು ಮಾಡಲಾಗ್ತಿದೆ. ಸಂಕಷ್ಟದ ಈ ಘಳಿಗೆಯಲ್ಲಿ ಬಡವರ ಬೆನ್ನಿಗೆ ಸರ್ಕಾರ ನಿಂತಿದೆ. ಯಾರೂ ಭಯ ಪಡುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೊದಿ ಅವರು ನಾಳೆ ಕರೆ ನೀಡಿದ ದೀಪ ಹಚ್ಚುವ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಿ ಕೊರೊನಾ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದು ಕರೆ ಕೊಟ್ಟರು.