ETV Bharat / state

ಆಟೋಗಳಲ್ಲಿ ನಿಯಮಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನ ಹತ್ತಿಸಿದ್ರೆ ಕಠಿಣ ಕ್ರಮ..

author img

By

Published : Jun 7, 2020, 9:45 PM IST

ಆಟೋಗಳಲ್ಲಿ ಮೂವರಿಗೆ ಮಾತ್ರ ಪ್ರಯಾಣಕ್ಕೆ ಅನುಮತಿಯಿದ್ದು, ಚಾಲಕನ ಪಕ್ಕದಲ್ಲಿ ಪ್ರಯಾಣಿಕರನ್ನು ಕೂರಿಸುವಂತಿಲ್ಲ. ನಿಯಮಕ್ಕಿಂತ ಹೆಚ್ಚು ಪ್ರಯಾಣಿಕರನ್ನ ಹತ್ತಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

CPI  J.S. Nyamegowda held meeting with  auto drivers meeting in basavakalyana
ಆಟೋಗಳಲ್ಲಿ ನಿಯಮಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನ ಹತ್ತಿಸಿದ್ರೆ ಕಠಿಣ ಕ್ರಮ: ಸಿಪಿಐ ಎಚ್ಚರಿಕೆ

ಬಸವಕಲ್ಯಾಣ(ಬೀದರ್) : ಆಟೋಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರನ್ನ ಸಾಗಿಸಬಾರದು. ನಿಯಮ ಮೀರುವ ಆಟೋಗಳ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಿಪಿಐ ಜೆ ಎಸ್‌ ನ್ಯಾಮಗೌಡರ ಎಚ್ಚರಿಸಿದರು.

ಆಟೋಗಳಲ್ಲಿ ನಿಯಮಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನ ಹತ್ತಿಸಿದ್ರೆ ಕಠಿಣ ಕ್ರಮ..

ನಗರದ ಸಿಪಿಐ ಕಚೇರಿ ಆವರಣದಲ್ಲಿ ನಡೆದ ಆಟೋ ಚಾಲಕರ ಸಭೆಯಲ್ಲಿ ಮಾತನಾಡಿದ ಅವರು, ಆಟೋ ಚಾಲಕರು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಆಟೋಗಳಲ್ಲಿ ಮೂವರಿಗೆ ಮಾತ್ರ ಪ್ರಯಾಣಕ್ಕೆ ಅನುಮತಿಯಿದ್ದು, ಚಾಲಕನ ಪಕ್ಕದಲ್ಲಿ ಪ್ರಯಾಣಿಕರನ್ನು ಕೂರಿಸುವಂತಿಲ್ಲ. ನಿಯಮಕ್ಕಿಂತ ಹೆಚ್ಚು ಪ್ರಯಾಣಿಕರನ್ನ ಹತ್ತಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಲ್ಲದೆ ಆಟೋ ಚಾಲಕರು ಕಡ್ಡಾಯವಾಗಿ ಯೂನಿಫಾರ್ಮ್ ಧರಿಸಬೇಕು. ಪ್ರತಿಯೊಬ್ಬ ಚಾಲಕನ ಹತ್ತಿರ ವಾಹನಕ್ಕೆ ಸಂಬಂಧಿಸಿದಂತೆ ದಾಖಲೆ ಪತ್ರ ಹಾಗೂ ಚಾಲನಾ ಪರವಾನಗಿ ಪತ್ರ ಹೊಂದಿರಬೇಕು. ರಸ್ತೆಯ ಮೇಲೆ ಎಲ್ಲೆಂದರಲ್ಲಿ ಆಟೋಗಳು ನಿಲ್ಲಿಸುವಂತಿಲ್ಲ. ತಮಗೆ ಸೂಚಿಸಿದ ಪಾರ್ಕಿಂಗ್ ಸ್ಥಳದಲ್ಲಿ ಮಾತ್ರ ನಿಲ್ಲಿಸಬೇಕು. ವಿಪರೀತ ಧ್ವನಿವರ್ಧಕ ಬಳಸಬಾರದು. ರಾತ್ರಿ ಹೊತ್ತು ಸಂಚರಿಸುವ ಆಟೋಗಳ ಮಾಹಿತಿ ಸಂಚಾರಿ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.