ಬಸವಕಲ್ಯಾಣ : ಕೊರೊನಾ ನಿಯಂತ್ರಣಕ್ಕೆ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದ ಆಸ್ಪತ್ರೆಗೆ ಹೊಗಲು ವಾಹನ ಸಿಗದೆ ಪಾಲಕರು ತಳ್ಳುವ ಗಾಡಿ ಮೇಲೆ ಮಕ್ಕಳನ್ನು ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಮನಕಲಕುವ ಘಟನೆ ನಗರದಲ್ಲಿ ನಡೆದಿದೆ.
ನಗರದ ತ್ರೀಪುರಾಂತನ ದಂಪತಿ ತಮ್ಮಿಬ್ಬರ ಮಕ್ಕಳ ಅನಾರೋಗ್ಯ ಹಿನ್ನೆಲೆ ತಳ್ಳುವ ಗಾಡಿಯಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅತೀ ವೇಗವಾಗಿ ಹರಡುತ್ತಿರುವ ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಮೇ 24ರವರೆಗೆ ಜಾರಿಗೊಳಿಸಿರುವ ಬಿಗುವಿನ ಲಾಕ್‌ಡೌನ್‌ನಿಂದ ಎಲ್ಲಾ ಸಾರಿಗೆ ಸೇವೆ ಬಂದ್ ಆಗಿವೆ.
ಇದು ರಾಜ್ಯದಲ್ಲಿ ಹಲವು ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ. ಅದರಲ್ಲಿಯೂ ಬಡವರು ಈ ಲಾಕ್ ಡೌನ್ ಸಂದರ್ಭದಲ್ಲಿ ಬಳಲಿ ಬೆಂಡಾಗಲಿದ್ದಾರೆ ಎನ್ನುವುದಕ್ಕೆ ನಗರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ ಎನ್ನಬಹುದಾಗಿದೆ.
ಪಟ್ಟಣದ ತ್ರೀಪುರಾಂತ ನಿವಾಸಿಗಳಾಗಿರುವ ಈ ದಂಪತಿ ತಮ್ಮ ಅನಾರೋಗ್ಯ ಪೀಡಿತ ಮಕ್ಕಳಿಬ್ಬರಿಗೆ ಆಟೋದಲ್ಲಿಯೂ ಕೂಡ ಕರೆದುಕೊಂಡು ಹೋಗದಂತಹ ಸ್ಥಿತಿ ನಿರ್ಮಾಣವಾಗಿರುವುದು ನೋವಿನ ಸಂಗತಿ. ಕಿ.ಮೀ.ಗಟ್ಟಲೇ ತಳ್ಳುಗಾಡಿಯಲ್ಲಿಯೇ ತಮ್ಮ ಮಕ್ಕಳ್ಳನ್ನು ಆಸ್ಪತ್ರೆಗೆ ತೆಗೆದುಕೊಂಡು ತೆರಳಿದ್ದಾರೆ.
ಬೆಳಗ್ಗೆ 6 ಗಂಟೆಯಿಂದಲೇ ರಸ್ತೆಗೆ ಇಳಿದ ಪೊಲೀಸರು, ಎದುರಿಗೆ ಸಿಕ್ಕವರಿಗೆ ಬೆತ್ತದ ರೂಚಿ ತೊಸಿದಲ್ಲದೆ, ಕೈಗೆ ಸಿಕ್ಕ ವಾಹನಗಳನ್ನು ಜಪ್ತಿ ಮಾಡುತಿದ್ದರು. ಹೀಗಾಗಿ, ಯಾವುದೇ ವಾಹನದ ಸೌಲಭ್ಯ ಸಿಗದ ಕಾರಣ ಈ ಮಕ್ಕಳಿಗೆ ತಳ್ಳುವ ಗಾಡಿ ಮೇಲೆ ಕುರಿಸಿಕೊಂಡು ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯ ಸ್ಥೀತಿ ನಿರ್ಮಾಣವಾಯಿತು ಎನ್ನುತ್ತಾರೆ ಮಕ್ಕಳ ಪಾಲಕರು.
ಆಟೋ ಹತ್ತಿಸಿ ಕಳಿಸಿದ ಸಿಪಿಐ : ಆಸ್ಪತ್ರೆಗೆ ತೆರಳಲು ಆಟೋ ಸೇರಿದಂತೆ ಇತರ ಯಾವುದೇ ವಾಹನಗಳು ಸಿಗದ ಕಾರಣ ತಳ್ಳುವ ಗಾಡಿಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ದಂಪತಿ ಆಸ್ಪತ್ರೆಗೆ ತೆರಳುವುದನ್ನು ಮಾರ್ಗ ಮಧ್ಯೆ ಗಮನಿಸಿದ ಸಿಪಿಐ ಜೆ.ಎಸ್.ನ್ಯಾಮಗೌಡರ್, ತಮ್ಮ ಸ್ವಂತ ಖರ್ಚಿನಲ್ಲಿ ಸ್ಥಳದಲ್ಲೇ ಆಟೋ ಒಂದನ್ನು ತರಿಸಿ ಮಕ್ಕಳ ಸಹಿತ ದಂಪತಿಯನ್ನ ಆಸ್ಪತ್ರೆಗೆ ಕಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.