ಬೀದರ್: ನಗರದ ಓಲ್ಡ್ ಸಿಟಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು 13 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ.
ನಗರದ ಓಲ್ಡ್ ಸಿಟಿಯ ಕಟೇನ್ಮೆಂಟ್ ಝೋನ್ನ ರೋಗಿ ಸಂಖ್ಯೆ 939ರ ಸಂಪರ್ಕಕ್ಕೆ ಬಂದ 13 ವರ್ಷದ ಬಾಲಕನಿಗೆ ಸೋಂಕು ತಗುಲಿದ್ದು, ಜಿಲ್ಲಾ ಕೊರೊನಾ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಜಿಲ್ಲಾಡಳಿತ ನಡೆಸಿದ ಸಾಮೂಹಿಕ ವೈದ್ಯಕೀಯ ತಪಾಸಣೆ ವೇಳೆ ಕೊರೊನಾ ಪತ್ತೆಯಾದ ತಾಯಿಯ ಸಂಪರ್ಕಕ್ಕೆ ಬಂದ ಬಾಲಕನಲ್ಲೂ ಕೊವಿಡ್-19 ಪತ್ತೆಯಾಗಿದೆ ಎಂದು ಹೇಳಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 56ಕ್ಕೆ ಏರಿದೆ. ಇದರಲ್ಲಿ 14 ಜನರು ಗುಣಮುಖರಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಉಳಿದ 40 ಸೋಂಕಿತರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.