ETV Bharat / state

ಕಾಂಗ್ರೆಸ್ ಪಕ್ಷ ಗುರು ಬಸವಣ್ಣನವರ ತತ್ವ ಸಿದ್ಧಾಂತಗಳ ಆಧಾರದ ಮೇಲೆ ನಡೆಯುತ್ತಿದೆ: ಡಿಕೆಶಿ - DK shivakumar visit to BasavaKalyan

ಗುರು ಬಸವಣ್ಣನವರ ತತ್ವ ಸಿದ್ಧಾಂತ ಮತ್ತು ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಒಂದೇ ಆಗಿದೆ. ಕಾಂಗ್ರೆಸ್ ಪಕ್ಷ ಬಸವಣ್ಣನವರ ತತ್ವ, ಸಿದ್ಧಾಂತ, ನೀತಿಯ ಆಧಾರದಲ್ಲಿ ನಡೆಯುತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ.

ಡಿಕೆ ಬಸವಕಲ್ಯಾಣದಲ್ಲಿ  ಡಿಕೆ ಶಿವಕುಮಾರ್​ ​
ಬಸವಕಲ್ಯಾಣದಲ್ಲಿ ಡಿಕೆ ಶಿವಕುಮಾರ್​
author img

By

Published : Nov 25, 2020, 1:19 AM IST

ಬಸವಕಲ್ಯಾಣ: ಉಪ ಚುನಾವಣೆ ನಿಮಿತ್ತ ಬಸವ ಕಲ್ಯಾಣಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು, ಇಲ್ಲಿಯ ಅನುಭವ ಮಂಟಪ, ಶ್ರೀ ಬಸವೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿನೀಡಿ ದರ್ಶನ ಪಡೆದಿದ್ದಾರೆ.

ಮಂಗಳವಾರ ಅನುಭವ ಮಂಟಪಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್ ಅವರು, ಅನುಭವ ಮಂಟಪದಲ್ಲಿ ಗುರು ಬಸವಣ್ಣನವರ ದರ್ಶನ ಪಡೆದು, ವಚನ ಪಠಣ ಮಾಡಿದರು. ನಂತರ ಇಲ್ಲಿಗೆ ಸಮಿಪದ ಗವಿ ಮಠಕ್ಕೆ ಭೇಟಿನೀಡಿ ಜಗದ್ಗುರು ಶ್ರೀ ಘನಲಿಂಗ ರುದ್ರಮುನಿಗಳ ಗದ್ದುಗೆ , ನಂತರ ನಗರದ ರಾಜಬಾಗ್ ಸವಾರ್ ದರ್ಗಾಕ್ಕೆ ಭೇಟಿನೀಡಿ ದರ್ಶನ ಪಡೆದ ಡಿಕೆಶಿ, ನಂತರ ಐತಿಹಾಸಿಕ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶ್ವ ಗುರು ಬಸವಣ್ಣನವರ ದರ್ಶನ ಪಡೆದರು.

ಅನುಭವ ಮಂಟಪಕ್ಕೆ ಭೇಟಿ ನೀಡಿದ ಡಿಕೆಶಿ

ನಂತರ ಮಾಧ್ಯಮದೊಂದಿಗೆ ಮಾತನಾಡಿ, " ಗುರು ಬಸವಣ್ಣನವರ ತತ್ವ ಸಿದ್ಧಾಂತ ಮತ್ತು ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಒಂದೇ ಆಗಿದೆ. ಕಾಂಗ್ರೆಸ್ ಪಕ್ಷ ಬಸವಣ್ಣನವರ ತತ್ವ, ಸಿದ್ಧಾಂತ, ನೀತಿಯ ಆಧಾರದಲ್ಲಿ ನಡೆಯುತ್ತಿದೆ" ಎಂದರು.

ಮಾತು ಮುಂದುವರಿಸಿ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಸಮಾನತೆಗಾಗಿ ಕ್ರಾಂತಿ ನಡೆಸಿದ ಶರಣರ ಕಾಯಕ ನೆಲವಾಗಿರುವ ಬಸವಕಲ್ಯಾಣ ಪವಿತ್ರ ನೆಲವಾಗಿದೆ. ಕಲ್ಯಾಣದ ಕ್ರಾಂತಿ ನಡೆದ ಪವಿತ್ರ ಭೂಮಿಯಲ್ಲಿ ಸ್ಪರ್ಷ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ, ಧೈರ್ಯ ಸಿಗಲಿದೆ ಎಂಬ ವಿಶ್ವಾಸದಿಂದ ಇಲ್ಲಿಗೆ ಬಂದಿರುವೆ. ಬಸವಣ್ಣನವರ ಆದರ್ಶಗಳು ಜೀವನದುದ್ದಕ್ಕೂ ಅಳವಡಿಸಿಕೊಳ್ಳೋಣ, ಸಮಾಜದಲ್ಲಿ ಒಗ್ಗಟ್ಟು, ಶಾಂತಿ ಮೂಡಿಸುವ ಕೆಲಸ ಎಲ್ಲರಿಂದಲು ನಡೆಯಬೇಕಿದೆ. ಧರ್ಮ, ನ್ಯಾಯ, ನೀತಿ ಉಳಿಸುವುದಕ್ಕೆ ಪ್ರಾಮಣಿಕವಾಗಿ ಪ್ರಯತ್ನಿಸಬೇಕಿದೆ ಎಂದರು.

ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ ಪಾಟೀಲ, ರಹೀಮ್ ಖಾನ್, ಅಜಯಸಿಂಗ್, ಎಮ್‌ಎಲ್‌ಸಿಗಳಾದ ವಿಜಯಸಿಂಗ್, ಅರವಿಂದ ಅರಳಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.