ಬೀದರ್: ಬ್ರೀಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ಆಯಾಗಳಿಗೆ ಕೊರೊನಾ ಸೋಂಕು ದೃಢ ಪಡುತ್ತಿದ್ದಂತೆ ಉಳಿದ 60ಕ್ಕೂ ಅಧಿಕ ಡಿ ಗ್ರೂಪ್ ನೌಕರರಲ್ಲಿ ಆತಂಕ ಹೆಚ್ಚಾಗಿದ್ದು, ಸತತವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಅಗತ್ಯ ರಕ್ಷಣಾ ಸೌಲಭ್ಯ ನೀಡುವಂತೆ ಒತ್ತಾಯಿಸಿ ಕಣ್ಣೀರು ಹಾಕ್ತಿದ್ದಾರೆ.
ಬ್ರೀಮ್ಸ್ ಆಸ್ಪತ್ರೆ 'ಡಿ' ಗ್ರೂಪ್ ನೌಕರರು ಹೀಗೆ ಕಣ್ಣೀರು ಹಾಕ್ತಿರುವುದೇಕೆ? - ಬ್ರೀಮ್ಸ್ ಆಸ್ಪತ್ರೆ ಲೇಟೆಸ್ಟ್ ನ್ಯೂಸ್
ಬ್ರೀಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳ ಮಧ್ಯೆಯೇ ಕೆಲಸ ಮಾಡುತ್ತಿರುವ ಸಿಬ್ಬಂದಿ ಅಗತ್ಯ ರಕ್ಷಣಾ ಸೌಲಭ್ಯಳಿಲ್ಲದೇ ಆತಂಕದಿಂದಲೇ ಕೆಲಸ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬ್ರೀಮ್ಸ್ ಆಸ್ಪತ್ರೆ ಸಿಬ್ಬಂದಿಗೆ ಆತಂಕ
ಬೀದರ್: ಬ್ರೀಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ಆಯಾಗಳಿಗೆ ಕೊರೊನಾ ಸೋಂಕು ದೃಢ ಪಡುತ್ತಿದ್ದಂತೆ ಉಳಿದ 60ಕ್ಕೂ ಅಧಿಕ ಡಿ ಗ್ರೂಪ್ ನೌಕರರಲ್ಲಿ ಆತಂಕ ಹೆಚ್ಚಾಗಿದ್ದು, ಸತತವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಅಗತ್ಯ ರಕ್ಷಣಾ ಸೌಲಭ್ಯ ನೀಡುವಂತೆ ಒತ್ತಾಯಿಸಿ ಕಣ್ಣೀರು ಹಾಕ್ತಿದ್ದಾರೆ.
ಮಾಸ್ಕ್, ಪಿಪಿಇ ಕಿಟ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸದೇ ಆಡಳಿತ ಮಂಡಳಿ ಕಾರ್ಯನಿರ್ವಸುವಂತೆ ಹೇಳಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಪ್ಲಾಸ್ಟಿಕ್ ಹಾಕಿಕೊಂಡು ಮಲಗುವಂತೆ ಆಗಿದೆ.. ಒಂದು ತಿಂಗಳುಗಳ ಕಾಲ ಕೆಲಸ ಮಾಡಿದರೂ ನಮ್ಮ ಹಾಜರಾತಿ ಪುಸ್ತಕದಲ್ಲಿ ಗೈರು ಹಾಜರಿ ಹಾಕಲಾಗಿದೆ. ಅಲ್ಲದೇ ನಮಗೆ ಸೂಕ್ತ ವ್ಯವಸ್ಥೆ ನೀಡಿ ಎಂದು ಕೇಳಿದ್ರೆ ಎಲ್ಲರೂ ಮನೆಗೆ ಹೋಗಿ ಅಂತಿದ್ದಾರೆ ಎಂದು ಆರೋಪಿಸಿದ ಸಿಬ್ಬಂದಿ ಆಸ್ಪತ್ರೆ ಎದುರು ಕೂತು ಸಾರ್ವಜನಿಕರೊಟ್ಟಿಗೆ ದುಃಖ ತೋಡಿಕೊಂಡಿದ್ದಾರೆ.