ETV Bharat / state

ಬ್ರಿಮ್ಸ್ ವೈದ್ಯರ ಎಡವಟ್ಟು, ಆತಂಕದಲ್ಲಿ ಜನ - People in anxiety

ನಗರದ ಎಸ್‌ ಎಂ ಕೃಷ್ಣ ಬಡಾವಣೆ ವ್ಯಕ್ತಿಯೊಬ್ಬರು ಜುಲೈ 16ರಂದು ರಕ್ತದೊತ್ತಡ ಸಮಸ್ಯೆಯಿಂದ ಬಳಲಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು..

ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಜನರಲ್ಲಿ ಆತಂಕ
ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಜನರಲ್ಲಿ ಆತಂಕ
author img

By

Published : Jul 22, 2020, 9:30 PM IST

ಬೀದರ್ : ರಕ್ತದೊತ್ತಡದ ಸಮಸ್ಯೆಯಿಂದ ಬಳಲಿ ಸಾವನ್ನಪ್ಪಿದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಜನರಲ್ಲಿ ಆತಂಕ ಹೆಚ್ಚಾಗಿದೆ.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಜನರಲ್ಲಿ ಆತಂಕ

ನಗರದ ಎಸ್‌ ಎಂ ಕೃಷ್ಣ ಬಡಾವಣೆ ವ್ಯಕ್ತಿಯೊಬ್ಬರು ಜುಲೈ 16ರಂದು ರಕ್ತದೊತ್ತಡ ಸಮಸ್ಯೆಯಿಂದ ಬಳಲಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆದರೆ, ವೈದ್ಯರು ಸಹಜ ಸಾವು ಎಂದು ಪರಿಗಣಿಸಿ ಮೃತದೇಹ ಪ್ಯಾಕ್ ಮಾಡದೆ ಕುಟುಂಬಸ್ಥರಿಗೆ ನೀಡಿದ್ದರು.

ಹೀಗಾಗಿ ಬಡಾವಣೆಯ ನೂರಾರು ಜನರು ಸಾಮೂಹಿಕವಾಗಿ ಸೇರಿ ಜುಲೈ 17ರಂದು ಮೃತ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ನಂತರ ಮೃತ ವ್ಯಕ್ತಿಯ ಗಂಟಲು ದ್ರವದ ಮಾದರಿ ಪರೀಕ್ಷೆಯ ವರದಿಯಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ವರದಿ ಬರುತ್ತಿದ್ದಂತೆ ಬಡಾವಣೆಯ ಜನರು ಬ್ರಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.