ಬಸವಕಲ್ಯಾಣ: ಇಲ್ಲಿಯ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಮಡೋಳಪ್ಪ ಪಿಎಸ್ ಅವರಿಂದ ತೆರವಾದ ಸ್ಥಾನಕ್ಕೆ ಬೀರೇಂದ್ರಸಿಂಗ್ ಠಾಕೂರ ಅವರನ್ನು ನೇಮಿಸಲಾಗಿದೆ.
ಬೀರೇಂದ್ರಸಿಂಗ್ ಠಾಕೂರ ಅವರು ಬೀದರ್ ಜಿಪಂ ಸಹಾಯಕ ಕಾರ್ಯದರ್ಶಿಯಾಗಿದ್ದರು. ಇದೀಗ ಇವರನ್ನು ತಾಲೂಕು ಪಂಚಾಯಿತಿಗೆ ನೇಮಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ಇದುವರೆಗೆ ತಾಲೂಕು ಪಂಚಾಯತ್ ಇಒ ಆಗಿ ಕಾರ್ಯ ನಿರ್ವಹಿಸಿದ್ದ ಮಡೋಳಪ್ಪ ಪಿ.ಎಸ್ ಅವರ ವಿರುದ್ಧ ಭ್ರಷ್ಟಾಚಾರ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷತನದ ಆರೋಪಗಳು ಕೇಳಿ ಬಂದಿದ್ದವು.
ಕಳೆದ ಕೆಲ ದಿನಗಳ ಹಿಂದೆ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿಯೇ ಇಒ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಇಒ ಅವರನ್ನು ವರ್ಗಾವಣೆ ಮಾಡುವಂತೆ ಒಕ್ಕೊರಲಿನಿಂದ ನಿರ್ಣಯ ಕೈಗೊಂಡಿದ್ದರು.