ETV Bharat / state

ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ : 6.5 ಕ್ವಿಂಟಲ್ ಗಾಂಜಾ ಸೀಜ್, ಇಬ್ಬರ ಕೈಗೆ ಕೋಳ - undefined

ತೆಂಗಿನ ಲಾರಿಯಲ್ಲಿ ಲೋಡ್​​​ ಮಾಡಿ ಅಕ್ರಮವಾಗಿ ಗಾಂಜಾ ಸಾಗಾಟ - ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು-ಲಕ್ಷಾಂತರ ಮೌಲ್ಯದ ಗಾಂಜಾ, ಕಾರು ಸೀಜ್, ಇಬ್ಬರು ಆರೋಪಿಗಳ ಬಂಧನ

ಗಾಂಜಾ ಜಪ್ತಿ
author img

By

Published : May 5, 2019, 1:48 PM IST

ಬೀದರ್: ಕಳ್ಳರು ಚಾಪೆ ಕೆಳಗೆ ನುಸುಳಿದ್ರೇ, ಪೊಲೀಸರು ರಂಗೋಲಿ ಕೆಳಗೆ ನುಸುಳ್ತಾರೆ. ಅದಕ್ಕೊಂದು ಉದಾಹರಣೆ ಇವತ್ತು ಬೀದರ್ ನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆ. ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 6.5 ಕ್ವಿಂಟಲ್​ ಗಾಂಜಾ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಲ್ಲದೇ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಜಿಲ್ಲೆಯ ಔರಾದ್ ತಾಲೂಕಿನ ಜಂಬಗಿ ತಾಂಡಾ ಭಾಗದಲ್ಲಿ ಪೊಲೀಸರು ದಾಳಿ ಮಾಡಿದ್ದರು. ತೆಂಗಿನ ಲಾರಿಯಲ್ಲಿ ಲೋಡ್​​​ ಮಾಡಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುವ ವೇಳೆಯಲ್ಲಿ ರೆಂಡ್​​​ ಹ್ಯಾಂಡ್ ಆಗಿ ಪೊಲೀಸರ ಬಲೆಗೆ ದಂಧೆಕೋರರು ಸಿಕ್ಕಿ ಬಿದ್ದಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. ಜಂಬಗಿ ತಾಂಡದ ನಿವಾಸಿಗಳಾದ ಅನೀಲ, ವಿಜಯ ಎಂಬ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ, ನಾಪತ್ತೆಯಾಗಿರುವ ಜಮೀನು ಮಾಲೀಕ ಗೋಪಾಲ್​​​​ಗಾಗಿ ಖಾಕಿ ಪಡೆ ಹುಡುಕಾಟ ನಡೆಸುತ್ತಿದೆ.

ಗಾಂಜಾ ಜಪ್ತಿ

ದಾಳಿ ವೇಳೆಯಲ್ಲಿ ಒಂದು ಕಾರ್ ಮೂರು ಬೈಕ್​​​ಗಳು ಜಪ್ತಿ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠ ಟಿ. ಶ್ರೀಧರ್ ಅವರ ನೇತೃತ್ವದಲ್ಲಿ ಎಎಸ್​ಪಿ ನಾಗರಾಜ್ ರೆಡ್ಡಿ, ಡಿವೈಎಸ್​​ಪಿ ವೆಂಕನಗೌಡ ಪಾಟೀಲ್ ಸೇರಿದಂತೆ ಹಲವು ಪೊಲೀಸ್​​ ಅಧಿಕಾರಿಗಳ ತಂಡ ಸ್ಥಳದಲ್ಲೇ ಪಂಚನಾಮೆ ನಡೆಸಿದ್ದು, ಈ ಕುರಿತು ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸತತ ಪರಿಶ್ರಮಕ್ಕೆ ಸಿಕ್ಕ ಫಲ :

ಕಳೆದ ಮೂರು ತಿಂಗಳಿಂದ ಬೀದರ್ ಎಸ್​​​ಪಿ ಟಿ.ಶ್ರೀಧರ ಅವರು ಗಾಂಜಾ ದಲ್ಲಾಳಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಇದಕ್ಕಾಗಿ ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್​​​​ಗಳ ಗಸ್ತು ಕೂಡ ಹೆಚ್ಚಿಸಿದ್ದರು. ಆದರೆ, ಆರೋಪಿಗಳು ಬಸ್​​​ಗಳ ಮೂಲಕ ಗಾಂಜಾ ಸಾಗಾಟ ಮಾಡುವಾಗ ಸಿಕ್ಕಿ ಬಿದ್ದಿದ್ದರು. ಈ ದಾಳಿಯಿಂದ ಗಾಂಜಾ ಎಲ್ಲಿಂದ ಬರುತ್ತೆ ಎನ್ನುವುದರ ಮಾಹಿತಿ ಈ ಹಿಂದೆಯೇ ಗೊತ್ತಾಗಿತ್ತು. ಒಡಿಶಾ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿಯೂ ಮಾದಕ ದಂಧೆಯ ಜಾಲ ವ್ಯಾಪಿಸಿಕೊಂಡಿದೆ.

Intro:
Etv bharat Exclusive...

ಬೀದರ್ ಪೊಲೀಸರ್ ದೊಡ್ಡ ಬೇಟೆ- 8 ಟನ್ ಗಾಂಜಾ ಜಪ್ತಿ...?

ಬೀದರ್:
ಜಿಲ್ಲಾ ಪೊಲೀಸರ ಇತಿಹಾಸದಲ್ಲೆ ನಡೆಯದ ದೊಡ್ಡ ಬೇಟೆಯೊಂದು ಆಡುವುದರಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಅಂದಾಜು 8 ಟನ್ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ ಎಂದು ಈಟಿವಿ ಭಾರತ ಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ತೆಲಂಗಣ ಹಾಗೂ ರಾಜ್ಯದ ಗಡಿ ಭಾಗದಲ್ಲಿರುವ ಜಿಲ್ಲೆಯ ಔರಾದ್ ತಾಲೂಕಿನ ಜಂಬಗಿ ಭಾಗದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆನ್ನಲಾಗಿದ್ದು ಕಳೇದ ಮೂರು ತಿಂಗಳಿಂದ ಬೀದರ್ ಎಸ್.ಪಿ ಟಿ.ಶ್ರೀಧರ ಅವರು ಗಾಂಜಾ ಮೂಲ ದಲ್ಲಾಳಿಗಳ ಪತ್ತೆಗಾಗಿ ಭಾರಿ ಶೋಧ ನಡರಸಿದ್ದರು. ಇದಕ್ಕಾಗಿ ಜಿಲ್ಲೆಯ ಎಲ್ಲಾ ಚೇಕ್ ಪೊಸ್ಟ್ ಗಳ ಗಸ್ತು ಕೂಡ ಹೆಚ್ಚಿಸಿದ್ದರು ಆದ್ರೆ ಆರೋಪಿಗಳು ಬಸ್ ಗಳ ಮೂಲಕ ಗಾಂಜಾ ಸಾಗಾಟ ಮಾಡುವಾಗು ಸಿಕ್ಕಿ ಬಿದ್ದಿದ್ದರು. ಸಣ್ಣ ಪುಟ್ಟ ದಾಳಿಗಳಲ್ಲಿ ಗಾಂಜಾ ಎಲ್ಲಂದ ಬರುತ್ತೆ ಎನ್ನುವುದು ಈ ಹಿಂದೆಯೆ ಗೊತ್ತಾಗಿತ್ತು ಓಡಿಸ್ಸಾ ದಿಂದ ತೆಲಂಗಣ ಮೂಲಕ ರಾಜ್ಯದ ಗಡಿಯ ಮೂಲಕ ಮಹಾರಾಷ್ಟ್ರ ಸೇರಿದಂತೆ ರಾಜ್ಯದಲ್ಲಿ ಮಾದಕ ದಂಧೆ ವ್ಯಾಪಿಸಿಕೊಂಡಿದ್ದರು. ಈ ಗಾಂಜಾ ಮಾಫೀಯಾದ ಹೆಡೆಮುರಿ ಕಟ್ಟುವಲ್ಲಿ ಎಸ್.ಪಿ ಟಿ.ಶ್ರೀಧರ ನೇತೃತ್ವದ ಪೊಲೀಸರ ತಂಡ ಯಶಸ್ವಿಯಾಗಿದೆ.

ಆದ್ರೆ ಈ ಕುರಿತು ಮಾಹಿತಿ ಹೊರ ಹಾಕದ ಪೊಲೀಸರು ಸ್ಥಳಕ್ಕೆ ಮಾಧ್ಯಮದವರನ್ನು ಕರೆದೊಯ್ದು ಸ್ಥಳದಲ್ಲೆ ಸುದ್ದಿಗೊಷ್ಠಿ ಮಾಡಲು ಯೋಜಿಸಿದ್ದಾರೆ.

ಬಿ.ಕೆ ಸಿಂಗ್ ಅವಧಿಯಲ್ಲೂ ದಾಳಿ:

ಬೀದರ್ ನ ಎಸ್ ಪಿಯಾಗಿದ್ದ ಬಿ.ಕೆ ಸಿಂಗ್ ಅವರ ಅವಧಿಯಲ್ಲು ಇದೇ ಮಾದರಿಯ ದಾಳಿಯಾಗಿತ್ತು ಆದ್ರೆ ಅಂದು ಜಂಬಗಿ ಅರಣ್ಯ ಭಾಗ ಹಾಗೂ ಗದ್ದೆಗಳಲ್ಲಿ ಗಾಂಜಾ ಬೆಳೆಸಲಾಗಿತ್ತು ಹಸಿ ಗಾಂಜಾ ದಾಳಿ ಮಾಡಿದ್ದರು. ಆ ವೇಳೆಯಲ್ಲೂ ಮಾಧ್ಯಮವನ್ನು ಸ್ಥಳಕ್ಕೆ ಕೊಡೊಯ್ದು ಗಾಂಜಾ ಮಾಫೀಯಾದ ಮುಖವಾಡ ಬಯಲು ಮಾಡಿದ್ದು ನೆನಪಾಗುತ್ತೆ.Body:AnilConclusion:Bidar

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.