ಬೀದರ್: ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಕರ್ನಾಟಕ ಲಾಕ್ಡೌನ್ ಆಗಿದೆ. ಈ ಹಿನ್ನೆಲೆ ಗಡಿ ಜಿಲ್ಲೆ ಬೀದರ್ನಲ್ಲಿ ಮನೆಯಿಂದ ಹೊರಗೆ ಬಂದ್ರೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆಯಾಗುತ್ತೆ ಎಂದು ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಸೋಮವಾರ ತಡರಾತ್ರಿ ನಗರದ ಗವಾನ್ ಚೌಕ್ನಲ್ಲಿ ಸರ್ಕಾರಿ ವಾಹನದ ಮೂಲಕ ಜಿಲ್ಲಾಡಳಿತ ಸಿಬ್ಬಂದಿ ಬಂದು ಮೈಕ್ನಲ್ಲಿ ಈ ಘೋಷಣೆ ಮಾಡಿದ್ದಾರೆ. ಲಾಕ್ಡೌನ್ ಮಾಡಿರುವುದರಿಂದ ಯಾರೂ ಮನೆಯಿಂದ ಹೊರಗೆ ಬರಬಾರದು, ಬಂದ್ರೆ ಎರಡು ಸಾವಿರ ರೂಪಾಯಿ ದಂಡ, ಎರಡು ವರ್ಷಗಳ ಜೈಲು ಹಾಗೂ ಜಾಮೀನು ರಹಿತ ವಾರೆಂಟ್ ಕೂಡ ಜಾರಿ ಆಗಬಹುದು ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಭೀತಿ ಆವರಿಸಿಕೊಂಡಿದ್ದು, ಅಗತ್ಯ ವಸ್ತುಗಳ ಖರೀದಿಯನ್ನು ಬಿಟ್ಟರೆ ಯಾರು ಕೂಡ ಮನೆಯಿಂದ ಹೊರ ಬರ್ತಿಲ್ಲ. ಪೊಲೀಸ್ ಇಲಾಖೆ ಸಿಬ್ಬಂದಿ ಕೂಡ ಜನರು ಬರದಂತೆ ನಿಗಾ ವಹಿಸುತ್ತಿದ್ದಾರೆ.