ETV Bharat / state

ಹೊರ ರಾಜ್ಯದಿಂದ ಬಂದವರಿಗೆ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್​​: ಸ್ಥಳೀಯರ ವಿರೋಧ

ಹೊರ ರಾಜ್ಯದಿಂನಗರಸಭೆ ಪೌರಾಯುಕ್ತೆ ಮೀನಾ ಕುಮಾರಿ ಬೋರಾಳಕರ್ ನೇತೃತ್ವದಲ್ಲಿ ತ್ರಿಪುರಾಂತದಲ್ಲಿನ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲು ಸ್ಥಳ ಪರಿಶೀಲನೆ ನಡೆಸುವಾಗ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು, ಜನ ವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲು ತೀವ್ರ ವಿರೋಧ ವ್ಯಕ್ತಪಡಿಸಿದರು.

Basavakalyana Quarantine in government school oppose of locals
ಬಸವಕಲ್ಯಾಣ: ಹೊರ ರಾಜ್ಯದಿಂದ ಬಂದವರಿಗೆ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್, ಸ್ಥಳೀಯರ ವಿರೋಧ..!
author img

By

Published : May 8, 2020, 7:31 PM IST

ಬಸವಕಲ್ಯಾಣ: ಹೊರ ರಾಜ್ಯದಿಂದ ಬಂದ ಜನರಿಗೆ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಮುಂದಾದ ಅಧಿಕಾರಿಗಳ ನಡೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಪ್ರಸಂಗ ನಗರದ ತ್ರಿಪುರಾಂತದಲ್ಲಿ ನಡೆದಿದೆ.

ನಗರಸಭೆ ಪೌರಾಯುಕ್ತೆ ಮೀನಾ ಕುಮಾರಿ ಬೋರಾಳಕರ್ ನೇತೃತ್ವದಲ್ಲಿ ತ್ರಿಪುರಾಂತದಲ್ಲಿನ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲು ಸ್ಥಳ ಪರಿಶೀಲನೆ ನಡೆಸುವಾಗ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು, ಜನ ವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲು ತೀವ್ರ ವಿರೋಧ ವ್ಯಕ್ತಪಡಿಸಿದರು. ತ್ರಿಪುರಾಂತದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಿ ಇಲ್ಲಿ ಜನರನ್ನು ಇರುಸುವುದು ಸರಿಯಲ್ಲ. ಶಾಲೆ ಸುತ್ತಲೂ ಮನೆಗಳಿದ್ದು, ಇಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಿದಲ್ಲಿ ಶಾಲೆ ಸುತ್ತಲು ಇರುವ ಮನೆಗಳಲ್ಲಿ ವಾಸಿಸುವ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತೆ.

ಕ್ವಾರಂಟೈನ್‌ಲ್ಲಿರುವ ಜನರು ಶಾಲೆ ಕಿಟಕಿಗಳಿಂದ ಹೊರಗಡೆ ಉಗುಳುವ ಸಾಧ್ಯತೆ ಇರುತ್ತೆ. ಹೀಗಾಗಿ ಸಾರ್ವಜನಿಕರಿಗೆ ಕೊರೊನಾ ಹರಡುವ ಭೀತಿ ಎದುರಾಗುತ್ತದೆ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಸುದ್ದಿ ತಿಳಿದ ನಗರ ಠಾಣೆ ಪಿಎಸ್ಐ ಸುನೀಲ್ ಕುಮಾರ್ ನೇತೃತ್ವದ ಸಿಬ್ಬಂದಿ ತಂಡ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿತು. ಆದರೆ ಪಟ್ಟು ಬಿಡದ ಸ್ಥಳೀಯರು ಯಾವುದೇ ಕಾರಣಕ್ಕೂ ಇಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಬಾರದು. ನಗರದ ಹೊರ ವಲಯದಲ್ಲಿರುವ ವಿವಿಧ ಸರ್ಕಾರಿ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸುವಂತೆ ಮನವಿ ಮಾಡಿದರು.

ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತರು, ಸ್ಥಳೀಯರೊಂದಿಗೆ ಚರ್ಚಿಸಿ ಸಮಸ್ಯೆ ಕುರಿತು ಮಾಹಿತಿ ಪಡೆದರು. ಸ್ಥಳೀಯರಿಗೆ ಸಮಸ್ಯೆಯಾಗುತ್ತೆ ಎನ್ನುವುದಾದರೆ ಇಲ್ಲಿಯ ಬದಲಾಗಿ ಬಂದವರ ಓಣಿ ಸಮಿಪವಿರುವ ವಸತಿ ನಿಲಯದಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸುವಂತೆ ಸ್ಥಳದಲಿದ್ದ ಪಿಎಸ್ಐ ಸುನಿಲಕುಮಾರ ಅವರಿಗೆ ನಿರ್ದೇಶನ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.