ETV Bharat / state

ಕಂಡಕ್ಟರ್ ವಿರುದ್ಧ ಜಾತಿ ನಿಂದನೆ ಕೇಸ್​: ಬಸ್ ಸಂಚಾರ ಬಂದ್ ​ಮಾಡಿ ಪ್ರತಿಭಟನೆ

ಈಶಾನ್ಯ ಸಾರಿಗೆ ಸಂಸ್ಥೆಯ ಕಂಡಕ್ಟರ್ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಕ್ಕೆ ಆಕ್ರೋಶಗೊಂಡ ನೌಕರರು, ಬೀದರ್​ನಲ್ಲಿ ಬಸ್ ಸಂಚಾರ ಬಂದ್ ​ಮಾಡಿ ಪ್ರತಿಭಟಿಸಿದರು.

ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆ
author img

By

Published : Jul 30, 2019, 8:01 PM IST

Updated : Jul 30, 2019, 9:21 PM IST

ಬೀದರ್: ಈಶಾನ್ಯ ಸಾರಿಗೆ ಸಂಸ್ಥೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಿ, ಬಳಿಕ ಕಂಡಕ್ಟರ್ ಮೇಲೆ ದೂರು ನೀಡಿದ್ದ ಯುವಕರ ವಿರುದ್ಧ ಸಾರಿಗೆ ಸಂಸ್ಥೆ ನೌಕರರು ಆಕ್ರೋಶಗೊಂಡು, ಬಸ್ ಸಂಚಾರ ಬಂದ್ ಮಾಡಿ ಪ್ರತಿಭಟಿಸಿದರು.

ಬೀದರ್- ಚಿಟ್ಟಾ ಮಾರ್ಗದಲ್ಲಿ ಬೀದರ್ ಘಟಕದ ಬಸ್ ಕಂಡಕ್ಟರ್ ಮುದಸೀರ್ ಕಾರ್ಯನಿರ್ವಹಿಸುವಾಗ ಬಸ್​ನಲ್ಲಿದ್ದ ಯುವಕರ ಗುಂಪು ಕ್ಷುಲಕ ಕಾರಣಕ್ಕೆ ಜಗಳ ತೆಗೆದು ಥಳಿಸಿದ್ದರು. ಗಂಭೀರವಾಗಿ ಗಾಯಗೊಂಡ ಕಂಡಕ್ಟರ್​ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ನಡುವೆ ಹಲ್ಲೆ ಮಾಡಿದ ಯುವಕರೇ ನ್ಯೂಟೌನ್ ಪೊಲೀಸ್ ಠಾಣೆಗೆ ಹೋಗಿ, ಕಂಡಕ್ಟರ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ‌. ಇದರಿಂದ ಆಕ್ರೋಶಗೊಂಡ ಸಾರಿಗೆ ಸಂಸ್ಥೆ ನೌಕರರು ಇಂದು ಮಧ್ಯಾಹ್ನದಿಂದ ಬೀದರ್ ನಗರದ ಬಸ್ ನಿಲ್ದಾಣದಲ್ಲಿ ಬಸ್​ಗಳನ್ನು ರೋಡಿಗೆ ಇಳಿಸದೆ ಪ್ರತಿಭಟಿಸಿದರು. ನಮಗೆ ನ್ಯಾಯ ಕೊಡುವವರೆಗೆ ಬಸ್​ಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆ

ಸ್ಥಳಕ್ಕೆ ಈಶಾನ್ಯ ಸಾರಿಗೆ ಸಂಸ್ಥೆ ವಿಭಾಗೀಯ ಅಧಿಕಾರಿ ಭೇಟಿ ನೀಡಿ ನೌಕರರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರಬೇಕು. ಕಂಡಕ್ಟರ್ ಮೇಲೆ ದಾಖಲಿಸಿದ ಸುಳ್ಳು ಜಾತಿ ನಿಂದನೆ ಪ್ರಕರಣ ವಾಪಸ ಪಡೆಯಬೇಕು. ಅಲ್ಲದೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆಯಿಂದ ಪ್ರಯಾಣಿಕರು ಪರದಾಡುವಂತಾಗಿದ್ದು, ಶಾಲಾ ಕಾಲೇಜು ಪಾಸ್ ಹೊಂದಿರುವ ವಿಧ್ಯಾರ್ಥಿಗಳು ಬಸ್ ಇಲ್ಲದೇ ಕಂಗಾಲಾಗಿದ್ದರು.

Intro:ಕಂಡಕ್ಟರ್ ಮೇಲೆ ಹಲ್ಲೆ: ಬಸ್ ಓಡಾಟ ಬಂದ್ ಮಾಡಿ ಪ್ರತಿಭಟನೆ, ಪ್ರಯಾಣಿಕರ ಪರದಾಟ...!

ಬೀದರ್:
ಕ್ಷುಲಕ ಕಾರಣಕ್ಕೆ ಈಶಾನ್ಯ ಸಾರಿಗೆ ಸಂಸ್ಥೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಯುವಕರ ಗುಂಪು ಕಂಡಕ್ಟರ್ ಮೇಲೆನೆ ಜಾತಿ ನಿಂದನೆ ಪ್ರಕರಣ ದಾಖಲಿಸಿದಕ್ಕೆ ಆಕ್ರೋಶಗೊಂಡ ನೌಕರರು ಬಸ್ ಗಳು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೀದರ್ - ಚಿಟ್ಟಾ ಮಾರ್ಗದಲ್ಲಿ ಬೀದರ್ ಘಟಕದ ಬಸ್ ಕಂಡಕ್ಟರ್ ಮುದಸೀರ್ ಕಾರ್ಯನಿರ್ವಹಿಸುವಾಗ ಬಸ್ ನಲ್ಲಿ ಯುವಕರ ಗುಂಪು ಕ್ಷುಲಕ ಕಾರಣಕ್ಕೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಕಂಡಕ್ಟರ್ ನನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಹಲ್ಲೆ ಮಾಡಿದ ಯುವಕರೇ ನ್ಯೂಟೌನ್ ಪೊಲೀಸ್ ಠಾಣೆಗೆ ಹೊಗಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ‌.

ಇದರಿಂದ ಆಕ್ರೋಶಗೊಂಡ ಸಾರಿಗೆ ಸಂಸ್ಥೆ ನೌಕರರು ಇಂದು ಮಧ್ಯಾಹ್ನದಿಂದ ಬೀದರ್ ನಗರದ ಬಸ್ ನಿಲ್ದಾಣದಲ್ಲಿ ಬಸ್ ಗಳು ರೋಡಿಗೆ ಇಳಿಸದೆ ಪ್ರತಿಭಟನೆ ಆರಂಭಿಸಿದ್ದಾರೆ‌ ನಮಗೆ ನ್ಯಾಯ ಕೊಡುವರೆಗೆ ಬಸ್ ಗಳು ರಸ್ತೆಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಸ್ಥಳಕ್ಕೆ ಈಶಾನ್ಯ ಸಾರಿಗೆ ಸಂಸ್ಥೆ ವಿಭಾಗೀಯ ಅಧಿಕಾರಿ ಭೇಟಿ ನೀಡಿದ್ದು ನೌಕರರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.ಆದ್ರೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರಬೇಕು ಕಂಡಕ್ಟರ್ ಮೇಲೆ ದಾಖಲಿಸಿದ ಸುಳ್ಳು ಜಾತಿ ನಿಂದನೆ ಪ್ರಕರಣ ವಾಪಸ ಪಡೆಯಬೇಕು ಅಲ್ಲದೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆಯಿಂದ ಪ್ರಯಾಣಿಕರು ಪರದಾಡುವಂತಾಗಿದ್ದು ಶಾಲಾ ಕಾಲೇಜು ಪಾಸ್ ಹೊಂದಿರುವ ವಿಧ್ಯಾರ್ಥಿಗಳು ಬಸ್ ಇಲ್ಲದಕ್ಕೆ ಕಂಗಾಲಾಗಿ ಹೊಗಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು ಮತ್ತಷ್ಟು ಬಸ್ ಗಳು ಓಡದೆ ಪ್ರತಿಭಟನೆ ಮುಂದು ವರಿದ್ರೆ ಪ್ರಯಾಣಿಕರ ಭಾರಿ ಪರದಾಟವಾಗಲಿದೆ.

ಬೈಟ್-೦೧: ಜಗನ್ನನಾಥ್ - ಸಾರಿಗೆ ನೌಕರ

ಬೈಟ್-೦೨: ರಮೇಶ- ಚಾಲಕ

Body:ಅನೀಲ

Conclusion:ಬೀದರ್
Last Updated : Jul 30, 2019, 9:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.