ಬಸವಕಲ್ಯಾಣ: ಅಗತ್ಯ ಪಿಪಿಇಗಳನ್ನು ಖರೀದಿಸಿ ತಪಾಸಣೆಗಳನ್ನು ತ್ವರಿತವಾಗಿ ವಿಸ್ತರಿಸಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರಿಗೆ ವಿಮೆ ಹಾಗೂ ಸುರಕ್ಷಾ ಕ್ರಮ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಐಟಿಯು ಆಶ್ರಯದಲ್ಲಿ ತಮ್ಮ ಮನೆಯಿಂದಲೇ ಒತ್ತಾಯಿಸಲಾಯಿತು.
ತಕ್ಷಣ ಎಲ್ಲ ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರದ ಜನರಿಗೆ 7,500 ನಗದು ವರ್ಗಾವಣೆ ಮಾಡಬೇಕು. ಆಹಾರ ಅಗತ್ಯವಿರುವ ಎಲ್ಲರಿಗೂ ಅಗತ್ಯವಿರುವಷ್ಟು ಆಹಾರ ಧಾನ್ಯಗಳು ಮತ್ತು ಆರೋಗ್ಯ ಸುರಕ್ಷಾ ಪರಿಕರಗಳನ್ನು ಮನೆಮನೆಗೆ ಉಚಿತವಾಗಿ ವಿತರಿಸಬೇಕೆಂದು ಇನ್ನು ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಲಾಗಿದೆ.
ಇನ್ನು ಕೊರೊನಾ ಸಮೀಕ್ಷೆಯ ಜೊತೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ತಮ್ಮ ಮನೆಯಿಂದಲೇ ಪ್ರತಿಭಟನೆ ನಡೆಸಿದರು ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಶ್ರೀದೇವಿ ಚಿವಡೆ ತಿಳಿಸಿದ್ದಾರೆ.