ಬಸವಕಲ್ಯಾಣ: ತಾಲೂಕಿನ ಆಲಗೂಡ ಗ್ರಾಮದ ವಾರ್ಡ್ ಸಂಖ್ಯೆ 1ರಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕೇಂದು ಇಲ್ಲಿಯ ನಿವಾಸಿಗಳು ಮನವಿ ಮಾಡಿದ್ದಾರೆ.
ಗ್ರಾಮದ ವಾರ್ಡ್ ಸಂಖ್ಯೆ1ರ ವ್ಯಾಪ್ತಿಯಲ್ಲಿ ಭೀಮನಗರದಲ್ಲಿ ಎರಡ್ಮೂರು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು, ಪ್ರತಿ ಮನೆಗೆ ಕೆಲ ಕೊಡಗಳು ಮಾತ್ರ ನೀರು ಸಿಗುತ್ತಿವೆ. ಇದು ಸಹ ಸಮರ್ಪಕವಾಗಿ ನೀರ ಬರದೆ ಜನ ನೀರಿಗಾಗಿ ಪರದಾಡಬೇಕಾಗುತ್ತಿದೆ. ಈ ಕುರಿತು ಪಿಡಿಒ ಅವರ ಗಮನಕ್ಕೆ ತಂದರೂ ಪ್ರಯೋಜನೆಯಾಗಿಲ್ಲ ಎಂದು ಆಲಗೂಡ ಗ್ರಾಮದ ಪ್ರಭುದ್ವ ಜಾರಿಟೇಬಲ್ ಟ್ರಸ್ಟ್ ನ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿದೆ. ಆದರೆ ಇಲ್ಲಿಯ ಜನರು ನೀರಿಗಾಗಿ ಸಮಸ್ಯೆ ಎದುರಿಸಬೇಕಾಗುತ್ತಿದೆ. ವಾರ್ಡ್ ಸಂಖ್ಯೆ ಒಂದರಲ್ಲಿ ಈ ರೀತಿಯಾಗುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಛಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ಕುಮಾರ ಮಾರುತಿ ಮನವಿ ಪತ್ರ ಸಲ್ಲಿಸಿದ್ದಾರೆ.