ಬಸವಕಲ್ಯಾಣ (ಬೀದರ್) : ಕೊರೊನಾ ಸೋಂಕಿತ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಜನರು ಮುಖಕ್ಕೆ ಮಾಸ್ಕ್ ಧರಿಸಿಯೇ ಸುತ್ತಾಡಬೇಕು ಅನ್ನೋದು ನಿಯಮ. ಆದ್ರೆ ನಿಯಮ ಮೀರಿ ಜವಾಬ್ದಾರಿ ಮರೆತು ಸುತ್ತಾಡುವ ಜನರಿಗೆ ನಗರಸಭೆ ದಂಡ ವಿಧಿಸುತ್ತಿದೆ.
ನಗರಸಭೆ ಪೌರಾಯುಕ್ತೆ ಮೀನಾಕುಮಾರಿ ಬೋರಾಳಕರ್ ಮಾರ್ಗದರ್ಶನದಲ್ಲಿ, ನಗರದ ಅಂಬೇಡ್ಕರ್ ಮುಖ್ಯರಸ್ತೆ ಮೇಲೆ ನಿಂತು ಸಾರ್ವಜನಿಕರನ್ನು ತಡೆದು ತಪಾಸಣೆ ನಡೆಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಮಾಸ್ಕ್ ಮರೆತು ಸಂಚರಿಸುತ್ತಿದ್ದ 76 ಜನರಿಗೆ ತಲಾ 50 ರೂಪಾಯಿಯಂತೆ ದಂಡ ವಿಧಿಸಿದರು.
ಇದನ್ನೂ ಓದಿ : ವೃದ್ಧ ದಂಪತಿ ಕಷ್ಟಕ್ಕೆ ಮರುಗಿದ ಪಿಎಸ್ಐ: ಈ ಜೀವಗಳ ನಿರ್ವಹಣೆ ಹೊಣೆ ಹೊತ್ತ ಅಧಿಕಾರಿ