ETV Bharat / state

ನಡು ರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ: ಹಳೇ ದ್ವೇಷ ಶಂಕೆ

ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದು ಮುಖದ ಮೇಲೆ ಕಲ್ಲಿನಿಂದ ಜಜ್ಜಿ ವಿಕೃತಿ ಮೆರೆದ ಘಟನೆ ನಡೆದಿದೆ.

ನಡು ರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ
author img

By

Published : Mar 16, 2019, 8:28 PM IST

ಬೀದರ್: ನಡು ರಸ್ತೆಯಲ್ಲೆ ಬೆಳ್ಳಂಬೆಳಗ್ಗೆ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದು ಮುಖದ ಮೇಲೆ ಕಲ್ಲಿನಿಂದ ಜಜ್ಜಿ ವಿಕೃತಿ ಮೆರೆದ ಘಟನೆ ಜಿಲ್ಲೆಯ ನಾವದಗಿ ಕ್ರಾಸ್ ಬಳಿ ನಡೆದಿದೆ.

ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದ ಸುನಿಲ ನಿರಗುಡಿ(45) ಎಂಬಾತ ಕೊಲೆಯಾದ ವ್ಯಕ್ತಿ. ಹಳೇ ದ್ವೇಷವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ವರವಟ್ಟಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾಗಿದ್ದ ಮಂಜುಷಾ ಅವರ ಪತಿ ಸುನಿಲ, ಇಂದು ಬೆಳಿಗ್ಗೆ ಬೈಕ್ ಮೇಲೆ ಭಾಲ್ಕಿ ಕೋರ್ಟ್​ಗೆ ಹಾಜರಾಗಬೇಕಿತ್ತು. ಈ ವೇಳೆ ಹೊಂಚು ಹಾಕಿ ಕೂತ ಆಗಂತುಕರ ತಂಡ ಮಾವಿನಹಳ್ಳಿ- ನಾವದಗಿ ಕ್ರಾಸ್ ಬಳಿ ಬೈಕ್ ಮೇಲೆ ಬರುತ್ತಿದ್ದ ಸುನಿಲ್​​ಗೆ ಖಾರದ ಪುಡಿ ಎರಚಿ ಮಾರಕಾಸ್ತ್ರದಿಂದ ಕೊಲೆ ಮಾಡಿ ನಂತರ ಗದ್ದೆಯಲ್ಲಿದ್ದ ಕಲ್ಲುಗಳಿಂದ ದೇಹವನ್ನು ಪುಡಿ ಮಾಡಿದ್ದಾರೆ.

ನಡು ರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಕಳೆದ ವರ್ಷ ಗ್ರಾಮ ಪಂಚಾಯತ್​ ಚುನಾವಣೆ ವಿಚಾರದಲ್ಲಿ ಸದಸ್ಯ ಅರವಿಂದ ಹುಲಸೂರೆ ಎಂಬಾತನನ್ನು ಬೈಕ್​​ಗೆ ಕಟ್ಟಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇಂದು ಕೊಲೆಯಾದ ಸುನಿಲ ಆರೋಪಿಯಾಗಿದ್ದು, ಜಾಮಿನಿನ ಮೇಲೆ ಹೊರ ಬಂದಿದ್ದ. ಹಳೇ ಕೊಲೆ ಪ್ರಕರಣದ ದ್ವೇಷದಿಂದಲೇ ಸುನಿಲನ ಹತ್ಯೆಯಾಗಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಖಟಕಚಿಂಚೊಳಿ ಪೊಲೀಸರು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Intro:Body:

KN_BDR_03_MURDER_160319_AV_7203280

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.