ETV Bharat / state

ತಿರುಪತಿ ತಿಮ್ಮಪ್ಪನಿಗೇ ಸಾಲ ನೀಡಿದ್ದ ಮೈಲಾರ ಮಲ್ಲಣ್ಣ! ಈ ದೇವರಿಗೆ ಒಂದು ತಿಂಗಳು ಅದ್ಧೂರಿ ಜಾತ್ರೆ

ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಭಾಲ್ಕಿ ತಾಲೂಕಿನ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಒಂದು ತಿಂಗಳು ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಕಳೆದ ವಾರ ಅದ್ಧೂರಿ ಚಾಲನೆ ಸಿಕ್ಕಿದ್ದು, ಒಂದು ತಿಂಗಳು ನಡೆಯುವ ಈ ಭಾಗದ ಏಕೈಕ ಜಾತ್ರೆ ಇದಾಗಿದೆ.

A grand drive for the month long Mylara Jatra
ಒಂದು ತಿಂಗಳು ನಡೆಯುವ ಅದ್ದೂರಿ ಮೈಲಾರ ಜಾತ್ರೆ
author img

By

Published : Dec 5, 2022, 6:23 AM IST

Updated : Dec 5, 2022, 3:50 PM IST

ಬೀದರ್: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಭಾಲ್ಕಿ ತಾಲೂಕಿನ ಮೈಲಾರ (ಖಾನಾಪುರ) ಮಲ್ಲಣ್ಣ ದೇವಸ್ಥಾನದಲ್ಲಿ ಒಂದು ತಿಂಗಳು ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಅದ್ಧೂರಿ ಚಾಲನೆ ಸಿಕ್ಕಿದ್ದು, ಒಂದು ತಿಂಗಳು ನಡೆಯುವ ಈ ಭಾಗದ ಏಕೈಕ ಜಾತ್ರೆಯಾಗಿರುವುದು ವಿಶೇಷ.

ಸಕಲ ಸಿದ್ಧತೆಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಸೇರಿ ದೇಶದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಮಲ್ಲಣ್ಣ ದೇವರ ದರ್ಶನ ಪಡೆಯಲಿದ್ದಾರೆ. ಭಾನುವಾರವಾದ ಇಂದು ಹೆಚ್ಚಿನ ಭಕ್ತರು ಆಗಮಿಸಿದ್ದರು. ಇಲ್ಲಿ ಸಂತೆ (ಮೈಲಾರ ಅಂಗಡಿ) ನಡೆಯುವ ಡಿ.31ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.

ಶ್ರೀ ಮಲ್ಲಣ್ಣ ದೇವಸ್ಥಾನ ಭಕ್ತರ ಭಾವೈಕ್ಯತೆ ಕೇಂದ್ರವೆನಿಸಿದೆ. ಈ ಮಂದಿರ ಪ್ರಾಚೀನ ಇತಿಹಾಸದೊಂದಿಗೆ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಮೈಲಾರ ಗ್ರಾಮದ ನಿಸರ್ಗದ ರಮಣೀಯ ಪರಿಸರದಲ್ಲಿ ದೇವಸ್ಥಾನವಿದೆ. ರಾಕ್ಷಸರ ಉಪಟಳ ನಾಶಮಾಡಲು ಮಲ್ಲಣ್ಣನು ಶಿವನ 11ನೇ ರೂಪ ತಾಳಿ ಮೈಲಾರಕ್ಕೆ ಬಂದು ನೆಲೆಸಿದ್ದನು ಎಂಬ ಪ್ರತೀತಿ ಇದೆ.

ದೇವಸ್ಥಾನದ ಸುತ್ತ ಹಲವು ನೀರಿನ ಝರಿಗಳಿದ್ದು, ಇಡೀ ಪರಿಸರ ಸುಂದರ ತಾಣವಾಗಿದೆ. ಶಿವ ಮಲ್ಹಾರ್, ಜಯ ಮಲ್ಹಾರ್, ಏಳಕೋಟ-ಏಳಕೋಟಿಗೆ ಎಂಬ ಘೋಷಣೆಗಳನ್ನು ನೋಡಿದರೆ ಶ್ರೀ ಮಲ್ಲಣ್ಣ ವಿವಿಧ ರೂಪ ತಾಳಿರುವುದಕ್ಕೆ ಸಾಕ್ಷಿ. ಶಿವನ ರೂಪ ತಳೆದ ಕಾರಣದಿಂದ ಶಿವ ಮಲ್ಹಾರ್ ಎಂದು ಕರೆಯಲಾಗುತ್ತದೆಯಂತೆ.

ತಿರುಪತಿ ತಿಮ್ಮಪ್ಪನಿಗೇ ಸಾಲ ನೀಡಿದ್ದ ಮೈಲಾರ ಮಲ್ಲಣ್ಣ.. ತಿಂಗಳ ಕಾಲ ಖಾನಾಪುರದಲ್ಲಿ ಜಾತ್ರೆ ಸಂಭ್ರಮ

ಜನರಿಗೆ ಕಿರುಕುಳ ನೀಡುತ್ತ ನೆಮ್ಮದಿ ಹಾಳುಗೆಡವಿ ಇನ್ನಿಲ್ಲದ ಕಷ್ಟ ಕೊಡುತ್ತಿದ್ದ ಮಣಿಕಂಠ ಮತ್ತು ಮಲ್ಲ ಎಂಬ ಅಸುರರನ್ನು ಸಂಹರಿಸಲು ಮಾರ್ತಾಂಡ ಭೈರವನ ರೂಪ ತಳೆದ ಶಿವ (ಮಲ್ಲಣ್ಣ) ಬಳಿಕ ಇಲ್ಲಿಯೇ ನೆಲೆಸಿದ್ದ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಈ ಘಟನೆ ದ್ವಾಪರಯುಗದಲ್ಲಿ ನಡೆದಿದೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಮಲ್ಹಾರಿ ಮಹಾತ್ಮೆ ಎಂಬ ಮರಾಠಿ ಪುಸ್ತಕದಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ.

ತಿರುಪತಿ ತಿಮ್ಮಪ್ಪನಿಗೂ ಸಾಲ ನೀಡಿದ್ದ ಮಲ್ಲಣ್ಣ: ವಿಶ್ವದ ಅತ್ಯಂತ ಶ್ರೀಮಂತ ದೇವರೆಂದೇ ಕರೆಯಿಸಿಕೊಳ್ಳುವ ಆಂಧ್ರದ ಪ್ರಸಿದ್ಧ ತಿರುಪತಿಯ ಶ್ರೀ ವೆಂಕಟೇಶ್ವರ (ತಿಮ್ಮಪ್ಪ) ಹಾಗೂ ಮೈಲಾರ ಮಲ್ಲಣ್ಣನಿಗೂ ವ್ಯಾವಹಾರಿಕ ಸಂಬಂಧ ಇತ್ತೆಂಬ ಉಲ್ಲೇಖವೂ ಇದೆ. ತಿಮ್ಮಪ್ಪನು ಮಲ್ಲಣ್ಣನ ಹತ್ತಿರ 7 ಕೋಟಿ ರೂ. ಸಾಲ ತೆಗೆದುಕೊಂಡು ಹೋಗಿದ್ದು, ಹಣ ಹಿಂದಿರುಗಿಸಲೇ ಇಲ್ಲವಂತೆ, ಹೀಗಾಗಿ ಭಕ್ತರು ಏಳು ಕೋಟಿ-ಏಳು ಕೋಟಿಗೆ ಎನ್ನುತ್ತಾರೆ ಅನ್ನುವ ಪ್ರತೀತಿ ಇದೆ. ಶಿವನ ಅವತಾರ ತಾಳಿದ್ದಕ್ಕಾಗಿ ಶಿವ ಮಲ್ಹಾರ್, ಅಸುರರನ್ನು ಸೋಲಿಸಿದ್ದಕ್ಕೆ ಜಯ ಮಲ್ಹಾರ್ ಎಂಬ ಘೋಷಣೆಗಳನ್ನು ಇಲ್ಲಿ ಭಕ್ತರು ಕೂಗುತ್ತಾರೆ.

ಭಂಡಾರ, ಕೊಬ್ಬರಿ ವಿಶೇಷ: ಮೈಲಾರ ಮಲ್ಲಣ್ಣನಿಗೆ ಭಕ್ತರು ಭಂಡಾರ(ಅರಿಶಿಣ) ಮತ್ತು ಕೊಬ್ಬರಿ ಹಾರಿಸುವ ವಾಡಿಕೆ ಇದೆ. ಇದಕ್ಕೆ ಚೌಪಡಿ ಎನ್ನುತ್ತಾರೆ. ಇದಕ್ಕೂ ಒಂದು ಕಥೆಯಿದೆ. ಅಸುರರನ್ನು ಸಂಹರಿಸಲು ಮಾರ್ಥಾಂಡ ರೂಪದಲ್ಲಿ ಬಂದಾಗ ಅಸುರರು ಮಾರ್ಥಂಡಗೆ ಹೊಡೆದು ಗಾಯಗೊಳಿಸಿದ್ದರು. ಆಗ ಮೈಗೆ ಭಂಡಾರ ಅನ್ನು ಹಾಕಿಕೊಂಡ ತಕ್ಷಣವೇ ವಾಸಿಯಾಯಿತು. ಅಸುರರನ್ನು ಸಂಹರಿಸಿದ ಕಾರಣಕ್ಕಾಗಿ ಟೆಂಗಿನ ಕಾಯಿ ಹಾರಿಸಿ ವಿಜಯೋತ್ಸವ ಆಚರಣೆ ಮಾಡಿದ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ಭಂಡಾರ ಹಾಗೂ ಟೆಂಗಿನ ಕಾಯಿ ಹಾರಿಸುವ ವಾಡಿಕೆ ಇದೆ.

ಮೈಲಾರ ಎಂದೇ ಪ್ರಖ್ಯಾತವಾದರೂ ಈ ಗ್ರಾಮಕ್ಕೆ ನಾಲ್ಕು ಹೆಸರಿರುವುದು ಇನ್ನೊಂದು ವಿಶೇಷ. ಖಾನಾಪುರ, ಮೈಲಾರ, ದಕ್ಷಿಣ ಕಾಶಿ ಹಾಗೂ ಪ್ರೇಮಪುರ. ಒಮ್ಮೆ ನಿಜಾಮನು ಹಾದು ಹೋಗುವಾಗ ಇಲ್ಲಿ ಊಟ ಸೇವಿಸಿದ್ದು, ಖಾನಾ ಬಹೂತ್ ಅಚ್ಛಾ ಹೈ ಎಂದನಂತೆ. ಹೀಗಾಗಿ ಇದಕ್ಕೆ ಖಾನಾಪುರ ಎಂಬ ಹೆಸರು ಬಂದಿದೆ ಎನ್ನುತ್ತಾರೆ ಹಿರಿಯರು.

ಸಾವಿರಾರು ವರ್ಷಗಳ ಹಿಂದೆ ಋಷಿ- ಮುನಿಗಳು ಅತ್ಯಂತ ಪ್ರೀತಿ, ಪ್ರೇಮದಿಂದ ವಾಸಿಸುತ್ತಿದ್ದ ಕಾರಣ ಇದಕ್ಕೆ ಪ್ರೇಮಪುರ ಎಂಬ ಹೆಸರು ಹಾಗೂ ವಾರಣಾಸಿಯಿಂದ ಇಲ್ಲಿಗೆ ಬಂದ ಒಬ್ಬ ತಪಸ್ವಿ ಈ ಕ್ಷೇತ್ರವು ಕಾಶಿ ಹಾಗೆ ಇದೆ ಮತ್ತು ಅಲ್ಲಿ ಕಾಣೆಯಾದ ತ್ರಿಶೂಲ ಇಲ್ಲಿ ದೊರೆತ ಕಾರಣಕ್ಕೆ ಇದನ್ನು ದಕ್ಷಿಣ ಕಾಶಿ ಎಂದು ಕರೆದನಂತೆ ಎಂಬ ಮಾತಿದೆ.

ಇದನ್ನೂ ಓದಿ:ಬೀದರ್​ ಇತಿಹಾಸ ನಮ್ಮ ಯುವ ಪೀಳಿಗೆಗೆ ತಿಳಿಯುವಂತಾಗಬೇಕು: ಭಗವಂತ ಖೂಬಾ

Last Updated : Dec 5, 2022, 3:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.