ETV Bharat / state

ಬಸವಕಲ್ಯಾಣ:  ಭಾಗ್ಯವಂತಿ ದೇವಿ ಮೂರ್ತಿ ಮೇಲೆಯೇ ಹತ್ತಿ ಕುಳಿತ ನಾಗಪ್ಪ... ಭಕ್ತರ ಕುತೂಹಲ! - ಭಾಗ್ಯವಂತಿ ದೇವಿ ಮೂರ್ತಿ

ಬಸವಕಲ್ಯಾಣ ತಾಲೂಕಿನ ಕೋಹಿನೂರವಾಡಿ ಗ್ರಾಮದಲ್ಲಿರುವ ಭಾಗ್ಯವಂತಿ ದೇವಿ ಮೂರ್ತಿ ಮೇಲೆ ನಾಗರ ಹಾವೊಂದು ಕಾಣಿಸಿಕೊಂಡಿದ್ದು, ದಸರಾ ಹಬ್ಬದ ಸಂದರ್ಭದಲ್ಲಿ ಗ್ರಾಮಕ್ಕೆ ಹಾವಿನ ರೂಪದಲ್ಲಿ ಭಾಗ್ಯವಂತಿ ದೇವಿ ಬಂದಿದ್ದಾಳೆ ಎಂದು ಗ್ರಾಮಸ್ಥರು, ಕರ್ಪೂರ ಆರತಿ ಬೆಳಗಿ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.

ಭಾಗ್ಯವಂತಿ ದೇವಿ ಮೂರ್ತಿ ಮೇಲೆ ಕಾಣಿಸಿಕೊಂಡ ನಾಗರ ಹಾವು
author img

By

Published : Oct 5, 2019, 8:12 AM IST

ಬಸವಕಲ್ಯಾಣ (ಬೀದರ್​): ಶ್ರೀ ಭಾಗ್ಯವಂತಿ ದೇವಿ ಮೂರ್ತಿ ಮೇಲೆ ನಾಗರ ಹಾವೊಂದು ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದ ಪ್ರಸಂಗ ಬಸವಕಲ್ಯಾಣ ತಾಲೂಕಿನ ಕೋಹಿನೂರವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಭಾಗ್ಯವಂತಿ ದೇವಿ ಮೂರ್ತಿ ಮೇಲೆ ಕಾಣಿಸಿಕೊಂಡ ನಾಗರ ಹಾವು

ನಿನ್ನೆ ಮಧ್ಯಾಹ್ನ 12ರ ಸುಮಾರಿಗೆ ಮೂರ್ತಿ ಸಮೀಪದ ಹವಾ ಮಲ್ಲಿನಾಥ ಆಶ್ರಮದಲ್ಲಿ ಹಾವು ಕಾಣಿಸಿಕೊಂಡಿದ್ದು, ಇಲ್ಲಿ ಜನ ಸೇರುತ್ತಿರುವುದನ್ನು ಗಮನಸಿದ ಹಾವು, ಆಶ್ರಮದ ಸಮಿಪವೇ ಪ್ರತಿಷ್ಠಾಪಿಸಲಾದ ಭಾಗ್ಯವಂತಿ ದೇವಿ ಮೂರ್ತಿ ಬಳಿ ತೆರಳಿ ಸಂಜೆವರೆಗೆ ಅಲ್ಲೇ ಠಿಕಾಣಿ ಹೂಡಿತ್ತು.

ಸುದ್ದಿ ತಿಳಿದ ಗ್ರಾಮದ ಜನರು ದಸರಾ ಹಬ್ಬದ ಸಂದರ್ಭದಲ್ಲಿ ಗ್ರಾಮಕ್ಕೆ ಹಾವಿನ ರೂಪದಲ್ಲಿ ಭಾಗ್ಯವಂತಿ ದೇವಿ ಬಂದಿದ್ದಾಳೆ ಎಂದು ಕರ್ಪೂರ ಆರತಿ ಬೆಳಗಿ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಗ್ರಾಮಸ್ಥರು ಮಲ್ಲಿನಾಥ ಶ್ರೀಗಳನ್ನು ಕರೆ ಮಾಡಿ ಸಂಪರ್ಕಿಸಿದ್ದು, ಹಾವಿಗೆ ಹಾನಿ ಮಾಡಬೇಡಿ ಎಂದು ಶ್ರೀಗಳು ಗ್ರಾಮಸ್ಥರಿಗೆ ಸಲಹೆ ನೀಡಿದ್ದಾರೆ.

ಈ ನಡುವೆ ಯುವಕರು ಹಾವಿನ ಸಮೀಪ ನಿಂತು ಸೆಲ್ಫಿ ತೆಗೆದುಕೊಂಡಿದ್ದಾರೆ. ಇದೇನು ಪವಾಡನೋ, ಸಹಜನೋ ಗೊತ್ತಿಲ್ಲ. ಸಂಜೆಯಾದರು ಹಾವು ಮಾತ್ರ ಸ್ಥಳಬಿಟ್ಟು ಕದಲುತ್ತಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Intro:(ಗಮನಕ್ಕೆ: ನಮ್ಮ ಸುದ್ದಿಗಳನ್ನು ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿಕೊಳ್ಳಿ ಸರ್)

ಮೂರ್ತಿಬಳಿ ಹಾವು ಕಾಣಿಸಿಕೊಂಡ ವಿಡಿಯೊ ಕಳಿಸಲಾಗಿದೆ

ಬಸವಕಲ್ಯಾಣ: ಶ್ರಿÃ ಭಾಗ್ಯವಂತಿ ದೇವಿ ಮೂರ್ತಿ ಬಳಿ ನಾಗರ ಹಾವೊಂದು ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದ ಪ್ರಸಂಗ ತಾಲೂಕಿನ ಕೋಹಿನೂರವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮಧ್ಯಾಹ್ನ ೧೨ರ ಸುಮಾರಿಗೆ ಮೂರ್ತಿ ಸಮಿಪದ ಹವಾ ಮಲ್ಲಿನಾಥ ಆಶ್ರಮದಲ್ಲಿ ಹಾವು ಪ್ರತ್ಯÃಕ್ಷ ಗೊಂಡಿದ್ದು, ಇಲ್ಲಿ ಜನ ಸೇರುತ್ತಿರುವದು ಗಮನಸಿದ ಹಾವು ಆಶ್ರಮದ ಸಮಿಪವೇ ಪ್ರತಿಷ್ಠಾಪಿಸಲಾದ ಭಾಗ್ಯವಂತಿ ದೇವಿ ಮೂರ್ತಿ ಬಳಿ ತೆರಳಿ ಸಂಜೆವರೆಗೆ ಅಲ್ಲೆ ಠೀಕಾಣಿ ಹೂಡಿದ್ದು ಜನರ ಕೂತುಹಲಕ್ಕೆ ಕಾರಣವಾಗಿದೆ.
ಹಾವು ಪ್ರತ್ಯÃಕ್ಷಗೊಂಡ ಸುದ್ದಿ ತಿಳಿದ ಜನರು ತಂಡೋಪ ತಂಡವಾಗಿ ಸ್ಥಳಕ್ಕೆ ಆಗಮಿಸಿ ಆಶ್ಚರ್ಯ ವ್ಯಕ್ತಪಡಿಸುವ ಜೋತೆಗೆ ಭಕ್ತಿ ಶ್ರದ್ದೆÃಯಿಂದ ನಮಿಸಿದರೆ ಮತ್ತೆ ಕೆಲವರು ಹಾವಿಗೆ ಕರ್ಪೂರ ಆರತಿ ಬೆಳಗಿ ಪೂಜೆ ಸಲ್ಲಿಸಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಗ್ರಾಮಕ್ಕೆ ಹಾವಿನ ರೂಪದಲ್ಲಿ ಭಾಗ್ಯವಂತಿ ದೇವಿ ಬಂದಿದ್ದಾಳೆ ಎಂದು ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.
ಈ ಮಧ್ಯೆ ಹಾವು ಕಂಡ ಗ್ರಾಮಸ್ಥರು ಮೊಬೈಲ್ ಮೂಲಕ ಹವಾ ಮಲ್ಲಿನಾಥ ಶ್ರಿÃಗಳಿಗೆ ಸಂಪರ್ಕಿಸಿದ್ದು, ಹಾವಿಗೆ ಹಾನಿ ಮಾಡಬೇಡಿ ಎಂದು ಶ್ರಿÃಗಳು ಗ್ರಾಮಸ್ಥರಿಗೆ ಸಲಹೆ ನೀಡಿದ್ದಾರೆ.
ಈ ನಡುವೆ ಯುವಕರು ಹಾವಿನ ಸಮಿಪ ನಿಂತು ಮೊಬೈಲ್‌ನಲ್ಲಿ ಸೇಲ್ಫಿ ತೆಗೆದುಕೊಂಡಿದ್ದಾರೆ. ಇದೇನು ಪವಾಡನೋ, ಸಹಜನೋ ಗೋತ್ತಿಲ್ಲ. ಆದರೆ ಸಂಜೆಯಾದರು ಹಾವು ಮಾತ್ರ ಸ್ಥಳಬಿಟ್ಟು ಕದಲುತಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.