ETV Bharat / state

ಬಾವಿಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು - ಈಜು ಬಾರದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು

ವಿದ್ಯಾರ್ಥಿಯೋರ್ವ ಬಾವಿಯಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದಲ್ಲಿ ನಡೆದಿದೆ.

Basavakalyan
ಸಾವನ್ನಪ್ಪಿದ ವಿದ್ಯಾರ್ಥಿ
author img

By

Published : Jun 5, 2021, 6:31 AM IST

ಬಸವಕಲ್ಯಾಣ(ಬೀದರ್): ಈಜು ಬಾರದ ವಿದ್ಯಾರ್ಥಿಯೊಬ್ಬ ಬಾವಿಯಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಲಾಡವಂತಿ ಗ್ರಾಮದಲ್ಲಿ ನಡೆದಿದೆ.

Basavakalyan
ಸಾವನ್ನಪ್ಪಿದ ವಿದ್ಯಾರ್ಥಿ

ಗ್ರಾಮದ ಅಮಿತ ಅಂಬಾರಾವ ಪಾಟೀಲ್ (17) ಈಜಲು ಹೋಗಿ ಮೃತಪಟ್ಟ ವಿದ್ಯಾರ್ಥಿ. ಶುಕ್ರವಾರ ಮಧ್ಯಾಹ್ನ ತನ್ನ ಮೂವರು ಗೆಳೆಯರೊಂದಿಗೆ ಗ್ರಾಮದ ಸಮೀಪದ ಖಾಸಗಿ ಬಾವಿಯೊಂದರಲ್ಲಿ ಈಜಲು ಹೋದ ಈತ, ಬೆನ್ನಿಗೆ ಪ್ಲಾಸ್ಟಿಕ್ ಡಬ್ಬ ಕಟ್ಟಿಕೊಂಡು ಈಜಾಡುತ್ತಿದ್ದ. ಈ ವೇಳೆ ಬೆನ್ನಿಗೆ ಕಟ್ಟಲಾಗಿದ್ದ ಪ್ಲಾಸ್ಟಿಕ್ ಡಬ್ಬ ಜಾರಿಕೊಂಡ ಕಾರಣ ಈತ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳೀಯ ಯುವಕರ ಸಹಾಯದೊಂದಿಗೆ ತಡರಾತ್ರಿ ವಿದ್ಯಾರ್ಥಿ ಶವ ಬಾವಿಯಿಂದ ಮೇಲೆತ್ತಿದ್ದಾರೆ. ಕಲಬುರಗಿಯ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಈತ ಲಾಕ್​ಡೌನ್ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ್ದ.

ಸುದ್ದಿ ತಿಳಿದ ಶಾಸಕ ಶರಣು ಸಲಗರ ಹಾಗೂ ತಹಶೀಲ್ದಾರ್ ಸಾವಿತ್ರಿ ಸಲಗರ್, ಮಂಠಾಳ ಠಾಣೆ ಪಿಎಸ್ಐ ಜಯಶ್ರೀ ಹೊಡಲ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಸ್ತೆ ಬದಿ ಮರಕ್ಕೆ ಕಾರು ಡಿಕ್ಕಿ: ರಜೆ ಮೇಲೆ ಮನೆಗೆ ಬಂದಿದ್ದ ಸಿಆರ್​ಪಿಎಫ್ ಯೋಧ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.