ಬೀದರ್: ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಅಭ್ಯಸಿಸುತ್ತಿದ್ದ ವಿನೋದ ಸುಭಾಷ್ (15) ಎಂಬ ಬಾಲಕ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಶಾಲೆಯಲ್ಲಿ ಅಲ್ಪಾವಧಿ ವಿಶ್ರಾಂತಿ ಗಂಟೆ ಬಾರಿಸಿದ್ದಕ್ಕೆ ಮುಖ್ಯಗುರುಗಳಿಗೆ ಮನೆಗೆ ಹೋಗಿ ಬರುವುದಾಗಿ ಅನುಮತಿ ಪಡೆದು ತನ್ನ ಸೈಕಲ್ ಏರಿ ಶಾಲೆಯಿಂದ ಮನೆಗೆ ಹೋಗುವಾಗ ಎದುರು ರಸ್ತೆಯಲ್ಲಿ ಬಂದ ಲಾರಿ ಸೈಕಲ್ಗೆ ಡಿಕ್ಕಿ ಹೊಡೆದಿದೆ. ಲಾರಿ ಹಿಂಬದಿಯ ಚಕ್ರಕ್ಕೆ ಬಾಲಕ ಸಿಲುಕಿ ಸಾವನ್ನಪ್ಪಿದ್ದಾನೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಮನ್ನಾಎಖ್ಖೆಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಫರ್ಧೆ.. ಯುವಕನ ಸಾವು