ಬೀದರ್: ಜಿಲ್ಲೆಯಲ್ಲಿ ಇಂದು ಒಂದೇ ದಿನ 76 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಓರ್ವ ವ್ಯಕ್ತಿ ಬಲಿಯಾಗುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸಾವಿನ ಶತಕ ಬಾರಿಸಿದೆ.
ಜಿಲ್ಲೆಯ ಔರಾದ್ 22, ಬಸವಕಲ್ಯಾಣ 06, ಭಾಲ್ಕಿ20, ಬೀದರ್ 21, ಹುಮನಾಬಾದ್ 7 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,017 ಕ್ಕೆ ಏರಿಕೆಯಾಗಿದ್ದು ಇಂದು 117 ಜನರು ಗುಣಮುಖರಾಗಿದ್ದು ಇಲ್ಲಿಯವರೆಗೆ 2,067 ಜನರು ಗುಣಮುಖರಾಗಿದ್ದಾರೆ. ಅಲ್ಲದೆ 100 ಜನರು ಕೊರೊನಾಗೆ ಬಲಿಯಾಗಿದ್ದು ಇನ್ನೂ 703 ಜನರ ಗಂಟಲು ದ್ರವದ ಪರಿಕ್ಷಾ ವರದಿ ಬರೋದು ಬಾಕಿ ಇದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.