ETV Bharat / state

ಕಾಳ ಸಂತೆಗೆ ಸಾಗಿಸುತ್ತಿದ್ದ 20 ಟನ್ ಪಡಿತರ ಅಕ್ಕಿ ಜಪ್ತಿ - Basavakalyana 20 tons of Rice s

ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಸೇರಬೇಕಿದ್ದ ಅಕ್ಕಿಯನ್ನ ಕಳ್ಳಮಾರ್ಗದ ಮೂಲಕ ಸಾಗಿಸಲು ಯತ್ನಿಸಲಾಗಿದ್ದು, ಆಹಾರ ಇಲಾಖೆ ಅಧಿಕಾರಿಗಳು ಈ ವೇಳೆ, ದಾಳಿ ನಡೆಸಿ ಲಾರಿ ಸಮೇತ ವಸ್ತುಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

Rice seized
ಪಡಿತರ ಅಕ್ಕಿ ಜಪ್ತಿ
author img

By

Published : Jun 3, 2020, 2:27 PM IST

ಬಸವಕಲ್ಯಾಣ(ಬೀದರ್​​): ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಮಾಹಿತಿ ಪಡೆದ ಆಹಾರ ಇಲಾಖೆ ಅಧಿಕಾರಿಗಳು, ಅನ್ಯರಾಜ್ಯಕ್ಕೆ ಸಾಗಿಸುತಿದ್ದ ಲಾರಿ ಸಹಿತ 6 ಲಕ್ಷ ರೂ. ಮೌಲ್ಯದ 200 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.

ಹೈದರಾಬಾದ್ - ಮುಂಬೈ ಮಾರ್ಗದ ರಾಷ್ಟ್ರೀಯ ಹೆದ್ದಾರಿ - 65ರ ಮೂಲಕ ಬೀದರ್​​ ಕಡೆಯಿಂದ ಲಾರಿಯಲ್ಲಿ ಅಕ್ಕಿ ಸಾಗಿಸುವ ವೇಳೆ, ಚಂಡಕಾಪೂರ ಸಮೀಪದ ಅಮೃತಕುಂಡ ಕ್ರಾಸ್ ಬಳಿ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳ ತಂಡ, ಅಕ್ಕಿ ತುಂಬಿದ ಲಾರಿ ಸಹಿತ 20 ಟನ್ ಪಡಿತರ ಅಕ್ಕಿ ಜಪ್ತಿ ಮಾಡಿಕೊಂಡಿದ್ದು, ಗುಜರಾತ್​​ ಮೂಲದ ಲಾರಿ ಚಾಲಕ ಮಾರು ನಜಾಭಾಯಿ ಹಾಗೂ ಕ್ಲೀನರ್ ಮಾರು ಕನಾಭಾಯಿ ಎನ್ನುವವರನ್ನು ಬಂಧಿಸಿದೆ.

ಈ ಅಕ್ಕಿಯ ಮಾಲೀಕ ಬೀದರ ತಾಲೂಕಿನ ಕಾಶೆಂಪೂರ ಗ್ರಾಮದ ಪರಮೇಶ್ವರ ಕೊಳಿ ಎನ್ನುವಾತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

ಆಹಾರ ಇಲಾಖೆ ಆಹಾರ ನಿರೀಕ್ಷಕರಾದ ರಾಮರತನ ದೇಗಲೆ, ರಾಜೇಂದ್ರ ವಡ್ಡಿ ನೇತೃತ್ವದ ತಂಡ ಈ ದಾಳಿ ನಡೆಸಿದ್ದು, ಕಾಳ ಸಂತೆಯಲ್ಲಿ ಮಾರಾಟ ಮಾಡಲು ಎಂದು ಬೀದರ್‌ನಿಂದ ಗುಜರಾತ್​ ರಾಜ್ಯಕ್ಕೆ ಅಕ್ಕಿ ಸಾಗಿಸಲು ಯತ್ನಿಸಿದ್ದರು ಎನ್ನಲಾಗಿದೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.