ETV Bharat / state

ನಿನ್ನೆ ಒಂದೇ ದಿನಕ್ಕೆ 11 ಪಾಸಿಟೀವ್, ಸ್ತಬ್ಧವಾದ ಬೀದರ್.. - ಬೀದರ್ ನ್ಯೂಸ್​

ನಗರ ಸೇರಿ ಚಿಟಗುಪ್ಪಾ ತಾಲೂಕಿನ ಮನ್ನಾಖೆಳ್ಳಿ ಹಾಗೂ ಬಸವಕಲ್ಯಾಣ ಪಟ್ಟಣ ಸಂಪೂರ್ಣ ಲಾಕ್‌ಡೌನ್ ಮಾಡಿ ಜಿಲ್ಲಾ ಪೊಲೀಸ್ ಇಲಾಖೆ ಕ್ರಮಕೈಗೊಂಡಿದೆ. ಅಂಗಡಿ-ಮುಂಗಟ್ಟು, ವ್ಯಾಪಾರ, ವ್ಯವಹಾರ ಎಲ್ಲವನ್ನೂ ಬಂದ್ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಜನ ರಸ್ತೆ ಮೇಲೆ ಬರದಂತೆ ತೀವ್ರ ನಿಗಾವಹಿಸಲಾಗಿದೆ. ಈ ವೇಳೆಯಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿ ಮನೆಯಲ್ಲಿ ಒಬ್ಬೊಬ್ಬರನ್ನು ತಪಾಸಣೆಗೆ ಒಳಪಡಿಸಿ ಅವರ ಆರೋಗ್ಯ ತಪಾಸಣೆಯ ವರದಿ ಸಿದ್ಧಪಡಿಸಲಾಗ್ತಿದೆ.

11 corona positive in a single day: strictness in Bidar
ಒಂದೇ ದಿನ 11 ಕೊರೊನಾ ಪಾಸಿಟೀವ್, ಸ್ತಬ್ದವಾಯ್ತು ಬೀದರ್ ಒಲ್ಡ್ ಸಿಟಿ...!
author img

By

Published : Apr 3, 2020, 5:48 PM IST

ಬೀದರ್: ಒಂದೇ ದಿನದಲ್ಲಿ 11 ಕೊರೊನಾ ವೈರಸ್ ಪಾಸಿಟೀವ್ ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಬೀದರ್ ನಗರದಲ್ಲಿ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ. ನಗರದ ಓಲ್ಡ್​ ಸಿಟಿ ಸಂಪೂರ್ಣವಾಗಿ ಸ್ತಬ್ಧವಾಗಿದೆ.

ಒಂದೇ ದಿನ 11 ಕೊರೊನಾ ಪಾಸಿಟೀವ್, ಸ್ತಬ್ಧವಾಯ್ತು ಬೀದರ್ ಓಲ್ಡ್ ಸಿಟಿ..

ನಗರದ ಪ್ರಮುಖ ರಸ್ತೆಗಳೆಲ್ಲವನ್ನೂ ಬ್ಯಾರಿಕೇಡ್​ ಹಾಕಿ ಪೊಲೀಸರೇ ಬಂದ್​ ಮಾಡಿದ್ದಾರೆ. ಒಂದೇ ದಿನದಲ್ಲಿ ದೆಹಲಿಯ ಜಮಾತ್‌ನಿಂದ ಮರಳಿದ್ದವರಲ್ಲಿ ದೊಡ್ಡ ಮಟ್ಟದಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದ್ ಮೇಲೆ ಜಿಲ್ಲಾಡಳಿತ ಸಾಲು ಸಾಲು ಸಭೆಗಳನ್ನು ಮಾಡಿ ರೋಗ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮಕೈಗೊಂಡಿದೆ. ಬೆಳಗ್ಗೆ 6 ಗಂಟೆಯಿಂದಲೇ ನಗರದ ರಸ್ತೆಯಲ್ಲಿ ಬೀಟ್ ಪೊಲೀಸರು ಬಿಡಾರ ಹೂಡಿ ಓಲ್ಡ್ ಸಿಟಿಯತ್ತ ಯಾರೂ ಪ್ರವೇಶವಾಗದಂತೆ ಮತ್ತು ಅಲ್ಲಿಂದ ಯಾರೂ ಹೊರ ಬರದಂತೆ ಕಣ್ಗಾವಲು ಹಾಕಿದ್ದಾರೆ. 3 ಕಿ.ಮೀ ವರೆಗೆ ನಿಷೇಧಿತ ಪ್ರದೇಶ ಹಾಗೂ ಅದನ್ನು ಬಿಟ್ಟು ಇನ್ನೂ 2 ಕಿ.ಮೀ ವರೆಗೆ ಬಫರ್ ಝೋನ್ ಅಳವಡಿಸಿ ಬಿಗಿ ಪೊಲೀಸ್ ಬಂದೋಬಸ್ತ್​ ಅಳವಡಿಸಲಾಗಿದೆ.

ನಗರ ಸೇರಿ ಚಿಟಗುಪ್ಪಾ ತಾಲೂಕಿನ ಮನ್ನಾಖೆಳ್ಳಿ ಹಾಗೂ ಬಸವಕಲ್ಯಾಣ ಪಟ್ಟಣ ಸಂಪೂರ್ಣ ಲಾಕ್‌ಡೌನ್ ಮಾಡಿ ಜಿಲ್ಲಾ ಪೊಲೀಸ್ ಇಲಾಖೆ ಕ್ರಮಕೈಗೊಂಡಿದೆ. ಅಂಗಡಿ-ಮುಂಗಟ್ಟು, ವ್ಯಾಪಾರ, ವ್ಯವಹಾರ ಎಲ್ಲವನ್ನೂ ಬಂದ್ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಜನ ರಸ್ತೆ ಮೇಲೆ ಬರದಂತೆ ತೀವ್ರ ನಿಗಾವಹಿಸಲಾಗಿದೆ. ಈ ವೇಳೆಯಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿ ಮನೆಯಲ್ಲಿ ಒಬ್ಬೊಬ್ಬರನ್ನು ತಪಾಸಣೆಗೆ ಒಳಪಡಿಸಿ ಅವರ ಆರೋಗ್ಯ ತಪಾಸಣೆಯ ವರದಿ ಸಿದ್ಧಪಡಿಸಲಾಗ್ತಿದೆ.

ಈ ಮೂರು ಪ್ರದೇಶಗಳನ್ನು ಹೊರತುಪಡಿಸಿ ಜಿಲ್ಲೆಯಾದ್ಯಂತ ಲಾಕ್‌ಡೌನ್ ಎಂದಿನಂತೆ ಬೀಗಿಗೊಳಿಸಲಾಗಿದೆ. ಜನರು ಅನಗತ್ಯ ರಸ್ತೆಗೆ ಇಳಿಯುವುದನ್ನು ಪೊಲೀಸರೇ ನಿಯಂತ್ರಣ ಮಾಡ್ತಿದ್ದಾರೆ. ಚೆಕ್‌ಪೋಸ್ಟ್‌ಗಳಲ್ಲಿ ಹೊರ ರಾಜ್ಯದ ಜನರಿಗೆ ರಾಜ್ಯಕ್ಕೆ ನುಸುಳದಂತೆ ಖಡಕ್ ಸೂಚನೆ ನೀಡಲಾಗಿದೆ. ಅಗತ್ಯ ವಸ್ತುಗಳ ಖರೀದಿ ಸೇರಿ ತುರ್ತು ಪರಿಸ್ಥಿತಿಯಲ್ಲಿ ಮನೆಯಿಂದ ಹೊರ ಬರುವವರ ಮೇಲೆ ತೀವ್ರ ನಿಗಾವಹಿಸಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.