ETV Bharat / state

ಕಾಳ ಸಂತೆಗೆ ಪಡಿತರ ಅಕ್ಕಿ: ಲಾರಿ ಸಹಿತ 100 ಕ್ವಿಂಟಾಲ್ ಅಕ್ಕಿ ಜಪ್ತಿ - ಬಸವಕಲ್ಯಾಣ ಸುದ್ದಿ

ಪಡಿತರ ಅಕ್ಕಿಯನ್ನು​ ಲಾರಿಯಲ್ಲಿ ಲೋಡ್​ ಮಾಡಿಕೊಂಡು ಕಲಬುರಗಿಯಿಂದ ಉಜಳಂಬ ಮಾರ್ಗವಾಗಿ ಮಹಾರಾಷ್ಟ್ರದ ಉಮ್ಮಾರ್ಗಾ ಕಡೆ ಸಾಗುತ್ತಿತ್ತು. ಉಜಳಂಬ ಗ್ರಾಮದ ಬಳಿ ದಾಳಿ ನಡೆಸಿದ ಅಧಿಕಾರಿಗಳ ತಂಡ, 10 ಟನ್ ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

Lorry
ಲಾರಿ
author img

By

Published : Aug 6, 2020, 4:14 AM IST

ಬಸವಕಲ್ಯಾಣ: ಅನ್ನ ಭಾಗ್ಯ ಯೋಜನೆಯಡಿ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿಯನ್ನು ಲಾರಿಯಲ್ಲಿ ಅಕ್ರಮವಾಗಿ ಹೊರ ರಾಜ್ಯಕ್ಕೆ ಸಾಗಿಸುತ್ತಿದ್ದ 270 ಲಕ್ಷ ರೂ. ಮೌಲ್ಯದ 100 ಕ್ವಿಂಟಾಲ್ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪಡಿತರ ಅಕ್ಕಿಯನ್ನು​ ಲಾರಿಯಲ್ಲಿ ಲೋಡ್​ ಮಾಡಿಕೊಂಡು ಕಲಬುರಗಿಯಿಂದ ಉಜಳಂಬ ಮಾರ್ಗವಾಗಿ ಮಹಾರಾಷ್ಟ್ರದ ಉಮ್ಮಾರ್ಗಾ ಕಡೆ ಸಾಗುತ್ತಿತ್ತು. ಉಜಳಂಬ ಗ್ರಾಮದ ಬಳಿ ದಾಳಿ ನಡೆಸಿದ ಅಧಿಕಾರಿಗಳ ತಂಡ, 10 ಟನ್ ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ವಿಕೆ ಸಲಗರ್ ಗ್ರಾಮದ ಲಾರಿ ಚಾಲಕ ಚಂದ್ರಕಾಂತ ಬಿರಬಿಟ್ಟೆ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಆಹಾರ ಇಲಾಖೆ ನಿರೀಕ್ಷಕ ರಾಜೇಂದ್ರ ವಡ್ಡೆ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ಆಹಾರ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಕಿ ಮಾಲೀಕ ಎನ್ನಲಾದ ವಿಜಯ ಪವಾರ ಎಂಬುವವರ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.