ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಮಂಟಪದಲ್ಲಿ ಹಸಿವಿನಿಂದ ಬಳಲುತ್ತಿರುವ ನಿರಾಶ್ರಿತರಿಗೆ ಹಾಗೂ ದೇವಸ್ಥಾನದ ಆವರಣದಲ್ಲಿ ವಾಸವಿರುವ ನೂರಾರು ಕೋತಿಗಳಿಗೆ ಕಳೆದ 78 ದಿನಗಳಿಂದ ಯುವ ಬ್ರಿಗೇಡ್ ತಂಡದವರು ಆಹಾರ ಪೂರೈಕೆ ಮಾಡಿ ಮಾನವೀಯತೆ ಮೆರದಿದ್ದಾರೆ.
ಕೊರೊನಾ ವೈರಸ್ನಿಂದಾಗಿ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಬಹಳಷ್ಟು ಕಡಿಮೆಯಾಗಿದೆ. ಇದರಿಂದ ಇಲ್ಲಿ ವಾಸವಿರುವ ಕೋತಿಗಳಿಗೆ ಆಹಾರದ ಅವಶ್ಯಕತೆ ಇದೆ. ಆದ್ದರಿಂದ ದಾನಿಗಳ ಸಹಾಯದಿಂದ ಆಹಾರ, ಹಣ್ಣುಗಳು, ಮೇವುಗಳನ್ನು ಪ್ರಾಣಿಗಳಿಗೆ ನೀಡುವ ಕೆಲಸವನ್ನು ಯುವ ಬ್ರಿಗೇಡ್ ತಂಡದ ಸದಸ್ಯರು ಮಾಡುತ್ತಿದ್ದೇವೆ ಎಂದು ಬ್ರಿಗೇಡ್ ನ ಮುಖ್ಯಸ್ಥ ರಾಚಯ್ಯ ಎಸ್. ಸ್ಥಾವರಿಮಠ ತಿಳಿಸಿದರು.
ಬ್ರಿಗೇಡ್ನ ಮುಖ್ಯಸ್ಥ ರಾಚಯ್ಯ ಎಸ್. ಸ್ಥಾವರಿಮಠ, ವಿಶ್ವನಾಥ, ಸಂಗಮೇಶ್, ತೇಜು, ವಿರೂಪಾಕ್ಷಿ ಮತ್ತು ಕಮಲಾಪುರದ ಯುವಕರು ಭಾಗವಹಿಸಿ ನಿತ್ಯ ಪ್ರಾಣಿಗಳಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ.