ಬಳ್ಳಾರಿ: ಕಾಲುಬಾಯಿ ರೋಗದಿಂದ ಬಳಲುತ್ತಿರುವ ತಾಯಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದೇ ಯುವತಿಯೊಬ್ಬಳು ತನ್ನ ಪರಿಸ್ಥಿತಿಯನ್ನು ತಿಳಿಸುತ್ತಾ ಮಾಡಿರುವ ಟಿಕ್ಟಾಕ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಜ್ಯೋತಿ ಕಟ್ಟಿಮನಿ ಎಂಬ ಯುವತಿ ತನ್ನ ಮೊಬೈಲ್ನಲ್ಲಿ ಲೈವ್ ವಿಡಿಯೊ ಮಾಡಿಕೊಂಡು ಟಿಕ್ಟಾಕ್ಗೆ ಹರಿಬಿಟ್ಟಿದ್ದಾಳೆ. ನನ್ನ ತಾಯಿಗೆ ಕಾಲುಬಾಯಿ ರೋಗವಿದೆ. ಅದರ ಚಿಕಿತ್ಸೆಗೆ ನನ್ನ ಬಳಿ ಹಣವಿಲ್ಲ. ನಾನು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಲಾಕ್ಡೌನ್ನಿಂದ ನಾನು ನಿರುದ್ಯೋಗಿಯಾಗಿದ್ದೇನೆ. ಆ ಕಂಪನಿಯಿಂದ ನನಗೆ ಮಾಸಿಕವಾಗಿ 16 ಸಾವಿರ ರೂ. ಸಂಭಾವನೆ ನೀಡುತ್ತಿದ್ದರು. ಅದರಲ್ಲೇ ಜೀವನ ನಡೆಸುತ್ತಿದ್ದೆ. ಈಗ ನನಗೆ ಕೆಲಸ ಇಲ್ಲ. ಹಣವೂ ಇಲ್ಲ. ಹೀಗಾಗಿ, ಸಿಎಂ ಅವರು ನನಗೊಂದು ಕೆಲಸ ಕೊಡಿಸಿ. ನನ್ನ ತಾಯಿಗೆ ಚಿಕಿತ್ಸೆ ಕೊಡಿಸಿ ಎಂದು ಅಳಲುತ್ತಲೇ ಗೋಗೆರೆದಿದ್ದಾಳೆ.
ಯುವತಿಯ ಸಹಾಯಕ್ಕೆ ಧಾವಿಸಿದ ಶಾಸಕ ಭೀಮಾನಾಯ್ಕ:
ಯುವತಿಯ ಅಸಹಾಯಕತೆ ಕಂಡು ಶಾಸಕ ಭೀಮಾನಾಯ್ಕ ಅವರು ಸಹಾಯಕ್ಕೆ ಧಾವಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಡಿಯೊವನ್ನು ಅವರು ಜ್ಯೋತಿ ತಾಯಿಗೆ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಾರೆ. ಶಾಸಕ ಭೀಮಾನಾಯ್ಕ, ಮನಗೆ ಬೇಕಾದ ದಿನಸಿ ಕೊಡಿಸಿದ್ದಾರೆ. ಹಗರಿ ಬೊಮ್ಮನಹಳ್ಳಿ ತಹಶೀಲ್ದಾರ್ ಆಶಪ್ಪ ಪೂಜಾರಿ ಆ ಯುವತಿಯ ಮನೆಗೆ ಭೇಟಿ ನೀಡಿ, ಸಮಸ್ಯೆಗಳನ್ನ ಆಲಿಸಿದ್ದಾರೆ.