ETV Bharat / state

ನಾವ್ ಬೀಳೋದಿಲ್ಲ, ನೀವ್ ಕಟ್ಟೋದಿಲ್ಲ: ಬಿಜೆಪಿಗರಿಗೆ ಐವಾನ್ ಡಿಸೋಜಾ ಸವಾಲು

ಬಿಜೆಪಿಗರು ರಾಜಕಾರಣ ಮಾಡಲು ಅನ್ ಫಿಟ್ ಎಂದು ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ವಾಗ್ದಾಳಿ ನಡೆಸಿದ್ದಾರೆ.

author img

By

Published : Jul 5, 2019, 11:01 PM IST

ಬಿಜೆಪಿ ವಿರುದ್ಧ ಐವಾನ್ ಡಿಸೋಜಾ ವಾಗ್ದಾಳಿ

ಬಳ್ಳಾರಿ: ನಾವ್ ಬೀಳೋದಿಲ್ಲ.‌ ನೀವ್ ಮತ್ತೆ ಕಟ್ಟೋದಿಲ್ಲ. ಬಿಜೆಪಿಗರು ಸರ್ಕಸ್ ಮಾಡ್ತಿದಾರೆ​ ಎಂದು​ ಕಾಂಗ್ರೆಸ್​​ನ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ವಾಗ್ದಾಳಿ ನಡೆಸಿದ್ದಾರೆ.

ಡಿಸಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವ್ (ಮೈತ್ರಿಕೂಟ ಸರ್ಕಾರ) ಬೀಳೋದಿಲ್ಲ‌. ನಮ್ ಬುಡ ಗಟ್ಟಿಯಾಗಿದೆ. ನೀವ್ (ಬಿಜೆಪಿಗರು) ಕಟ್ಟೋದಿಲ್ಲ. ನಿಮ್ಗೆ ಈ ಸರ್ಕಾರ ಬೀಳುತ್ತದೆ ಎಂಬ ಭ್ರಮನಿರಸನ ಆಗಿಬಿಟ್ಟಿದೆ. ಆಗಾಗಿ, ನಮ್ ಕಡೆ ಈ ಹಳ್ಳಿಗಳಲ್ಲಿ ದೊಂಬರಾಟ ನಡೆಯುತ್ತೆ. ಅದೇ‌ ಮಾದರಿಯಲ್ಲೇ ಈ ಬಿಜೆಪಿಗರು ದೊಂಬರಾಟ ನಡೆಸುತ್ತಿದ್ದಾರೆಂದು ದೂರಿದ್ದಾರೆ.

ಬಿಜೆಪಿ ವಿರುದ್ಧ ಐವಾನ್ ಡಿಸೋಜಾ ವಾಗ್ದಾಳಿ

ಈ ಮೈತ್ರಿಕೂಟದ ಸರ್ಕಾರ ಬೀಳಿಸುವ ಬಿಜೆಪಿ ಗೇಮ್ ಪ್ಲಾನ್ ವರ್ಕೌಟ್ ಆಗುತ್ತಿಲ್ಲ. ಬಿಜೆಪಿಯವರು ಸರ್ಕಾರವನ್ನ ಅಸ್ಥಿರಗೊಳಿಸಲು ಪ್ರಯತ್ನಿಸಿ 9 ಬಾರಿ ಫೇಲ್ ಆಗಿದ್ದಾರೆ. ನೀವೆಲ್ಲಾ ಫೇಲ್ ಸ್ಟುಡೆಂಟ್ಸ್, ನಿಮಗೆ ಮತ್ತೆ ಪ್ರಯತ್ನಿಸುವ ಅವಕಾಶಗಳಿಲ್ಲ. ನೀವೆಲ್ಲ ರಾಜಕಾರಣ ಮಾಡಲು ಅನ್ ಫಿಟ್ ಎಂದು ಐವಾನ್​ ಛೇಡಿಸಿದ್ದಾರೆ.

ರಾಜಕೀಯದಲ್ಲಿ ಶಾಸಕರು ಆ ಪಕ್ಷದಿಂದ ಈ ಪಕ್ಷಕ್ಕೆ ಹೋಗಿ ಬರೋದು ಮಾಮೂಲಿ‌. ಬಿಜೆಪಿಯವರಿಗೆ ದೊಡ್ಡಾಟ ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಿಕ್ಕಚಿಕ್ಕ ಮೇಳ ಕಟ್ಟಿ ಕುಣಿಯುತ್ತಿದ್ದಾರೆ. ನಾಲ್ಕು ಜನರನ್ನು ಹಿಡಿದು ಬಯಲಾಟ ಆಟವಾಡುತ್ತಿದ್ದಾರೆ. ಬಳಿಕ ಬಂದ ದಕ್ಷಿಣೆ ತಗೆದುಕೊಂಡು ಹೋಗ್ತಾರೆ ಅಂತಾ ಡಿಸೋಜಾ ವ್ಯಂಗ್ಯವಾಡಿದ್ದಾರೆ.

Intro:ನಾವ್ ಬೀಳೋದಿಲ್ಲ; ನೀವ್ ಕಟ್ಟೋದಿಲ್ಲ….!
ಬಳ್ಳಾರಿ: ನಾವ್ ಬೀಳೋದಿಲ್ಲ.‌ ನೀವ್ ಮತ್ತೆ ಕಟ್ಟೋದಿಲ್ಲ. ಬಿಜೆಪಿಗರು ದೊಂಬರಾಟಿಗರಾಗಿದ್ದಾರೆಂದು ಕಾಂಗ್ರೆಸ್ ನ
ವಿಧಾನ ಪರಿಷತ್ ನ ಸದಸ್ಯ ಐವಾನ್ ಡಿಸೋಜಾ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯ ಡಿಸಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಡಿಸೋಜಾ ಅವರು ಮಾತನಾಡಿ, ನಾವ್ (ಮೈತ್ರಿಕೂಟ ಸರ್ಕಾರ) ಬೀಳೋದಿಲ್ಲ‌. ನಮ್ ಬುಡ ಗಟ್ಟಿಯಾಗಿದೆ. ನೀವ್ (ಬಿಜೆಪಿಗರು) ಕಟ್ಟೋದಿಲ್ಲ. ನಿಮ್ಗೆ ಈ ಸರ್ಕಾರ ಬೀರುತ್ತದೆ ಎಂಬ ಭ್ರಮನಿರಸನ ಆಗಿಬಿಟ್ಟಿದೆ. ಆಗಾಗಿ, ನಮ್ ಕಡೆ ಈ ಹಳ್ಳಿಗಳಲ್ಲಿ ದೊಂಬರಾಟ ನಡೆಯುತ್ತೆ. ಅದೇ‌ ಮಾದರಿಯಲ್ಲೇ ಈ ಬಿಜೆಪಿಗರು ದೊಂಬರಾಟ ನಡೆಸುತ್ತಿದ್ದಾರೆಂದು ದೂರಿದ್ದಾರೆ.
Body:ಈ ಮೈತ್ರಿಕೂಟದ ಸರ್ಕಾರ ಬೀಳಿಸುವ ಬಿಜೆಪಿ ಗೇಮ್ ಪ್ಲಾನ್ ವರ್ಕೌಟ್ ಆಗುತ್ತಿಲ್ಲ. ಬಿಜೆಪಿಯವರು ಸರ್ಕಾರವನ್ನ ಅಸ್ಥಿರ ಗೊಳಿಸಲು ಪ್ರತಯತ್ನಿಸಿ 9 ಬಾರಿ ಫೇಲ್ ಆಗಿದ್ದಾರೆ. ಬಿಜೆಪಿ ಯವರು ನಾವು ಸರ್ಕಾರವನ್ನ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿ ದ್ದೇವೆ ಅಂತಾ ಒಪ್ಪಿಕೊಳ್ಳಬೇಕು. ನೀವೆಲ್ಲಾ ಫೇಲ್ ಸ್ಟುಡೆಂಟ್ಸ್, ನಿಮಗೆ ಮತ್ತೆ ಪ್ರಯತ್ನಿಸುವ ಅವಕಾಶಗಳಿಲ್ಲ. ನೀವೆಲ್ಲ ರಾಜ ಕಾರಣ ಮಾಡಲು ಅನ್ ಫಿಟ್ ನೀವು ಎಂದು ಛೇಡಿಸಿದ್ದಾರೆ.
ಕಾಂಗ್ರೆಸ್ ಶಾಸಕ ಆನಂದಸಿಂಗ್ ರಾಜೀನಾಮೆ ನೀಡೋದು ಅವರ ವೈಯಕ್ತಿಕ ಕಾರಣ. ಆದ್ರೆ, ಅವರು ರಾಜೀನಾಮೆ ಕೊಟ್ಟ ತಕ್ಷಣ ಸರ್ಕಾರ ಬೀಳೋಲ್ಲ. ರಾಜಕೀಯದಲ್ಲಿ ಶಾಸಕರು ಆ ಪಕ್ಷದಿಂದ ಈ ಪಕ್ಷಕ್ಕೆ ಹೋಗಿ ಬರೋದು ಮಾಮೂಲಿ‌.ಬಿಜೆಪಿಯವರಿಗೆ ದೊಡ್ಡಾಟ ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಿಕ್ಕಚಿಕ್ಕ ಮೇಳ ಕಟ್ಟಿ ಕುಣಿಯುತ್ತಿದ್ದಾರೆ. ನಾಲ್ಕು ಜನರನ್ನು ಹಿಡಿದು ಬಯಲಾಟ ಆಟವಾಡುತ್ತಿದ್ದಾರೆ. ಬಳಿಕ
ಬಂದ ದಕ್ಷಿಣೆ ತಗೆದುಕೊಂಡು ಹೋಗ್ತಾರೆ ಅಂತಾ ಡಿಸೋಜಾ ವ್ಯಂಗ್ಯವಾಡಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_05_MLC_DISOJA_PRESS_BYTE_7203310

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.