ETV Bharat / state

ಹೆರಿಗೆ ವೇಳೆ ಗರ್ಭಿಣಿಯರಿಗೆ ಕೋವಿಡ್ ವರದಿ ಕಡ್ಡಾಯ : ಕುಟುಂಬಸ್ಥರಿಗೆ ಇಲ್ಲದ ಪರದಾಟ - Hospet

ಹಗರಿಬೊಮ್ಮನಹಳ್ಳಿ‌ ನಿವಾಸಿ‌ ಬಸವರಾಜ ಅವರು‌ ಮಾತನಾಡಿ, ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆಗಳು ಕೋವಿಡ್ ವರದಿಗಳನ್ನು ಕೇಳುತ್ತಿವೆ. ವರದಿ ಬರಲು ಮೂರು‌ ದಿನ ತಡವಾಗುತ್ತದೆ. ಈ‌ ಬಗ್ಗೆ ಸರ್ಕಾರ ಗಂಭೀರ ಚಿಂತನೆ‌ ನಡೆಸಿ ಸಮಸ್ಯೆ ಪರಿಹರಿಸಬೇಕು..

Hospet
ಹೆರಿಗೆ ಸಂದರ್ಭದಲ್ಲಿ ಮಹಿಳೆ ಕೋವಿಡ್ ವರದಿ ಕಡ್ಡಾಯ
author img

By

Published : Mar 22, 2021, 7:43 PM IST

ಹೊಸಪೇಟೆ : ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆಗಳು ಕೋವಿಡ್ ವರದಿ ಕೇಳುತ್ತಿವೆ. ಇದು ಜನರಿಗೆ ಸಂಕಷ್ಟ ತಂದೊಡ್ಡಿದೆ. ಮಹಿಳೆಯರ ಜೀವಕ್ಕೆ‌ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ಈ‌‌‌ ಕುರಿತು ತ್ವರಿತಗತಿಯಲ್ಲಿ‌ ಕ್ರಮಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗರ್ಭಿಣಿಯರಿಗಾಗ್ತಿರುವ ತೊಂದರೆ ಕುರಿತು ಡಿಹೆಚ್‌ಒ ಪ್ರತಿಕ್ರಿಯೆ..

ಹೊಸಪೇಟೆಯ ಆಸ್ಪತ್ರೆಗಳನ್ನು ಸುತ್ತಮುತ್ತಲಿನ ತಾಲೂಕು ಜನರು ನೆಚ್ಚಿಕೊಂಡಿದ್ದಾರೆ.‌ ತಿಂಗಳಿಗೆ ಸರಿ ಸುಮಾರು 1000 ಮಹಿಳೆಯರು ಹೆರಿಗೆಗೆ ದಾಖಲಾಗುತ್ತಿದ್ದಾರೆ.‌ ಅವರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ.

ಕೋವಿಡ್ ವರದಿ ಕಡ್ಡಾಯ : ಮಹಿಳೆಯರಿಗೆ ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆಗಳು ಕೋವಿಡ್ ವರದಿ ಕಡ್ಡಾಯಗೊಳಿಸಿವೆ. ಇದು ಜನರಿಗೆ ನುಂಗಲಾರದ ತುತ್ತಿಗೆ ಪರಿಣಮಿಸಿದೆ. ಮಹಿಳೆಗೆ ಹೆರಿಗೆ ನೋವು‌‌ ಕಾಣಿಸಿದಾಗ ಕೋವಿಡ್ ಟೆಸ್ಟ್ ಮಾಡಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ನೋವು ನುಂಗವ ಪರಿಸ್ಥಿತಿ : ತಕ್ಷಣ ನೀಡುವ ಕೋವಿಡ್ ವರದಿಯನ್ನು ಆಸ್ಪತ್ರೆಗಳು ಸ್ವೀಕರಿಸುತ್ತಿಲ್ಲ.‌ ಮೂರು ಮತ್ತು ನಾಲ್ಕು ದಿನದ ಬಳಿಕ ಬರುವ ವರದಿ ಮಾತ್ರ ಪರಿಗಣಿಸುತ್ತಿವೆ‌.

ಹೀಗಾಗಿ, ಮಹಿಳೆ ಹೆರಿಗೆ ನೋವು ಕಾಣಿಸಿದರು ಸಹ ಮಾತ್ರೆ ನೀಡಿ ದಿನಗಳನ್ನ ಮುಂದೂಡಲಾಗುತ್ತಿದೆ. ಇದು ಪ್ರಕೃತಿಗೆ ವಿರುದ್ಧ ನಡೆಯಾಗಿದೆ. ಒಂದು ವೇಳೆ ಪಾಸಿಟಿವ್ ವರದಿ ಬಂದರೇ ಮಹಿಳೆ ಯೋಚನೆ ಮಾಡಲು ಸಾಧ್ಯವಿಲ್ಲ.

ಮಾಹಿತಿ ಕೊರತೆ : ಹೆರಿಗೆ ನೀಡಿದ ದಿನಗಳ ಮುಂಚೆ ಕೋವಿಡ್ ವರದಿ ಪಡೆಯಬೇಕು ಎಂದು ಸರ್ಕಾರ ನಿಯಮ ಮಾಡಿದೆ. ಆದರೆ, ಈ ನಿಯಮ ಬಹುತೇಕರಿಗೆ ತಿಳಿದಿಲ್ಲ.‌ ಸರ್ಕಾರ ಹೆಚ್ಚು ಪ್ರಚಾರ ನೀಡಿ ಮಹಿಳೆಯರನ್ನು ಸಂಕಷ್ಟದಿಂದ ಪಾರು ಮಾಡಬೇಕಾಗಿದೆ.

ಈಟಿವಿ‌ ಭಾರತದೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜನಾರ್ಧನ್ ಅವರು ಮಾತನಾಡಿ, ಹೆರಿಗೆ ನಿರೀಕ್ಷಿತ ದಿನಾಂಕದ ಮುಂದೆ ಅವರು ಕೋವಿಡ್ ವರದಿ ಪಡೆಯಬೇಕಾಗುತ್ತದೆ.

ಒಂದು ಮಹಿಳೆಯ ಸ್ಥಿತಿ ನೋಡಿ ರ್ಯಾಟ್ (ತ್ವರಿತ ಪ್ರತಿಜನಕ ಪರೀಕ್ಷೆ -RAT) ಪರೀಕ್ಷೆಯನ್ನು ಮಾಡಬಹುದು.‌ ಜನರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದರು.

ಹಗರಿಬೊಮ್ಮನಹಳ್ಳಿ‌ ನಿವಾಸಿ‌ ಬಸವರಾಜ ಅವರು‌ ಮಾತನಾಡಿ, ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆಗಳು ಕೋವಿಡ್ ವರದಿಗಳನ್ನು ಕೇಳುತ್ತಿವೆ. ವರದಿ ಬರಲು ಮೂರು‌ ದಿನ ತಡವಾಗುತ್ತದೆ. ಈ‌ ಬಗ್ಗೆ ಸರ್ಕಾರ ಗಂಭೀರ ಚಿಂತನೆ‌ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.