ETV Bharat / state

ಯುವಕನ ಜೊತೆಗಿನ ಸೆಲ್ಫಿ ವಾಟ್ಸಾಪ್​​ನಲ್ಲಿ ವೈರಲ್: ಮನೆಯಲ್ಲಿ ಪ್ರಶ್ನಿಸಿದ್ದಕ್ಕೆ ಮಹಿಳೆ ಆತ್ಮಹತ್ಯೆ - ವಾಟ್ಸಾಪ್​

ಯುವಕನೊಂದಿಗೆ ತೆಗೆಸಿಕೊಂಡಿದ್ದ ಸೆಲ್ಫಿ ವೈರಲ್ ಆಗಿದ್ದು, ಈ ಬಗ್ಗೆ ಮನೆಯಲ್ಲಿ ಪ್ರಶ್ನಿಸಿದ್ದಕ್ಕೆ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

women-committed-suicide-when-her-selfies-with-boy-gone-viral
ಯುವಕನೊಂದಿಗಿನ ಸೆಲ್ಫಿ ವಾಟ್ಸಾಪ್​​ನಲ್ಲಿ ವೈರಲ್
author img

By

Published : Sep 24, 2021, 3:16 PM IST

ಹೊಸಪೇಟೆ (ವಿಜಯನಗರ): ಯುವಕನೊಂದಿಗೆ ತೆಗೆಸಿಕೊಂಡಿದ್ದ ಸೆಲ್ಫಿ ವೈರಲ್ ಆಗಿದ್ದು, ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಗುರುವಾರ ನಡೆದಿದೆ.

ತಾಲೂಕಿನ ಹಿರೇಸೊಬಟಿ ಗ್ರಾಮದ ಶೀಲಾ (24) ಮೃತ ಮಹಿಳೆ. ಹಿರೇಸೊಬಟಿ ಗ್ರಾಮದ ಗೊರವಪ್ಪನವರ ನೀಲಪ್ಪ ಎನ್ನುವ ಯುವಕ ಬುಧವಾರ ಸೊನ್ನ ಗ್ರಾಮಕ್ಕೆ ತೆರಳಿ ಕೃಷಿಭೂಮಿಯಲ್ಲಿ ಮಹಿಳೆಯೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದ. ಆ ಬಳಿಕ ಮಹಿಳೆಯ ತವರು ಮನೆಯವರ ವಾಟ್ಸಾಪ್​ ಸೇರಿದಂತೆ ಇತರರಿಗೆ ಫೋಟೋ ಕಳುಹಿಸಿದ್ದಾನೆ.

ಈ ವಿಷಯ ತಿಳಿದ ಮಹಿಳೆಯ ತಂದೆ, ಮಗಳನ್ನು ಈ ಕುರಿತು ವಿಚಾರಿಸಿದ್ದಾರೆ. ಬಳಿಕ ಮಹಿಳೆ ಮನನೊಂದು ನೇಣಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಸುಗಳ ನಿಗೂಢ ಸಾವು ಪ್ರಕರಣ: ಮೃತ ಎತ್ತುಗಳ ಸಂಖ್ಯೆ 30ಕ್ಕೆ ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.