ಬಳ್ಳಾರಿ : ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಶನಿವಾರ ಮತ್ತು ಭಾನುವಾರದಂದು ವಾರಾಂತ್ಯದ ಕರ್ಫ್ಯೂ ಜಾರಿ ಇರಲಿದೆ. ಈ ದಿನ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಈ ವಾರಾಂತ್ಯದ ಕರ್ಫ್ಯೂ ಜಾರಿ ಇರುತ್ತೆ. ಈ ವೇಳೆಯಲ್ಲಿ ಸಾರ್ವಜನಿಕರ ಅನಗತ್ಯ ಓಡಾಟವನ್ನ ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.

ಕಳೆದ ಸೋಮವಾರದಿಂದ ಇಂದಿನವರೆಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿ ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿ, ಕೃಷಿ ಸಾಮಗ್ರಿಗಳ ಮಾರಾಟಕ್ಕೆ ಅವಕಾಶವನ್ನ ಕಲ್ಪಿಸಲಾಗಿತ್ತು. ಅದರನ್ವಯ ಮಧ್ಯಾಹ್ನ 2 ರಿಂದ ಬರುವ ಸೋಮವಾರ ಜೂನ್ 21ರ ಬೆಳಗ್ಗೆ 6ರವರೆಗೆ ವಾರಾಂತ್ಯದ ಕರ್ಫ್ಯೂ ಜಾರಿ ಇರಲಿದೆ.
ಹೀಗಾಗಿ, ಮೆಡಿಕಲ್ ಶಾಪ್, ಆಸ್ಪತ್ರೆ, ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ಪ್ರತಿದಿನ ಬೆಳಗ್ಗೆ ಹಾಲು ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರ ಜೂನ್ 21ರ ನಂತರ ಯಾವ ರೀತಿಯ ಲಾಕ್ಡೌನ್ ಅನುಸರಿಸಬೇಕೆಂಬ ನಿಯಮಗಳನ್ನ ಪಾಲಿಸಬೇಕೆಂಬುದನ್ನ ಇನ್ನೂ ಪ್ರಕಟಿಸಬೇಕಿದೆಯಷ್ಟೇ..
ಓದಿ: ಸಂಚಾರಿ ವಿಜಯ್ರಿಂದ ಸ್ಫೂರ್ತಿ : ಮರಣ ನಂತರ ದೇಹದಾನಕ್ಕೆ ಮುಂದಾದ ಮಾಜಿ ಸಚಿವ ಅಭಯ್ ಚಂದ್ರ ಜೈನ್