ETV Bharat / state

ಮನೆ, ಬೆಳೆ ನಷ್ಟದ ವರದಿ ಕೇಂದ್ರಕ್ಕೆ ಸಲ್ಲಿಸುತ್ತೇನೆ: ಸಿಎಂ ಬಿಎಸ್​​ವೈ

ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಮಳೆಯಿಂದಾದ ಬೆಳೆ ನಷ್ಟದ ವರದಿ ಕೊಟ್ಟ ಮೇಲೆ ಕೇಂದ್ರದ ತಂಡ ರಾಜ್ಯಕ್ಕೆ ಬರಲಿದೆ ಎಂದು ಸಿಎಂ ತಿಳಿಸಿದ್ದಾರೆ.

we will Submit the Aerial Survey Report to Center government: CM BSY
ವೈಮಾನಿಕ ಸಮೀಕ್ಷೆ ವರದಿ ಕೇಂದ್ರಕ್ಕೆ ಸಲ್ಲಿಕೆ, ರಾಜ್ಯಕ್ಕೆ ಕೇಂದ್ರದ ತಂಡ ಬರಲಿದೆ: ಸಿಎಂ ಬಿಸ್​​ವೈ
author img

By

Published : Oct 21, 2020, 12:34 PM IST

ಬಳ್ಳಾರಿ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಬೆಳೆ ನಷ್ಟ ಕುರಿತಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬಳ್ಳಾರಿಯ ಜಿಂದಾಲ್ ಏರ್​​​ಪೋರ್ಟ್​​​ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಿಎಸ್​​​ವೈ, ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ವೈಮಾನಿಕ ಸಮೀಕ್ಷೆ ಕೈಗೊಳ್ಳುತ್ತಿದ್ದೇವೆ. ಆ ಭಾಗದಲ್ಲಿ ಏನೇನು ಹಾನಿಯಾಗಿದೆ ಎಂಬುದರ ಕುರಿತು ವರದಿ ಪಡೆಯಲಿದ್ದೇನೆ. ಮನೆ ಕಳೆದುಕೊಂಡವರ ಮಾಹಿತಿ ಜೊತೆಗೆ ಬೆಳೆ ಹಾನಿ ಬಗ್ಗೆಯೂ ಮಾಹಿತಿ ಪಡೆಯುವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸುರಿದ ಮಹಾಮಳೆಯಿಂದಾದ ಬೆಳೆ ನಷ್ಟದ ಕುರಿತು ಪಿಎಂ ಬಳಿಯೂ ಸಹ ಈಗಾಗಲೇ ಮಾತನಾಡಿರುವೆ. ಕರ್ನಾಟಕದಲ್ಲಿ ಮಳೆಯಿಂದಾದ ಬೆಳೆ ನಷ್ಟದ ವರದಿ ಕೊಟ್ಟ ಮೇಲೆ ಕೇಂದ್ರದ ತಂಡ ರಾಜ್ಯಕ್ಕೆ ಬರಲಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.