ಬಳ್ಳಾರಿ: ಜೂನ್. 27 ರಿಂದ 30 ರವರೆಗೆ ನಾಲ್ಕು ದಿನಗಳ ಕಾಲ ರಾಜ್ಯದ 1 ಸಾವಿರ ಗ್ರಾಮ ಪಂಚಾಯಿತಿಗಳ ಮುಂದೆ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ಕರ್ನಾಟಕ ಪ್ರಾಂತರೈತ ಸಂಘದ ವಿ.ಎಸ್. ಶಿವಶಂಕರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಪ್ರಾಂತರೈತ ಸಂಘದ ವಿ.ಎಸ್. ಶಿವಶಂಕರ್ ಅವರು, ಹಿಂದಿನ ದಿನಗಳಲ್ಲಿ ಉಳುವವನೇ ಭೂಮಿಯ ಒಡೆಯ ಎಂದಿತ್ತು. ಆದ್ರೆ ಇಂದು ಕಾಸು ಇದ್ದೋನೆ ಭೂಮಿಯ ಒಡೆಯ ಎನ್ನುವ ಪರಿಸ್ಥಿತಿಯನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಅವರು ದೂರಿದರು.
ಈ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆಯ ರೈತರು, ಕೃಷಿ ಕೂಲಿಕಾರರು, ಕಾರ್ಮಿಕರು ಭಾಗವಹಿಸಬೇಕು ಎಂದು ಅಖಿಲ ಭಾರತರೈತ ಸಂಘರ್ಷ ಸಮನ್ವಯ ಸಮಿತಿ, ಬಳ್ಳಾರಿ ಜಿಲ್ಲಾ ಸಮಿತಿಗೆ ಮನವಿ ಮಾಡಿಕೊಂಡಿದೆ.
ನಂತರ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆ ಆರ್. ಮಾಧವ ರೆಡ್ಡಿ ಅವರು, 10 ವರ್ಷದ ಹಿಂದಿನ ಕಂಪನಿ ಬೆಳೆ ಖರೀದಿ ಮಾಡುವಾಗ ನಿಗದಿತ ಬೆಲೆಗೆ 2 ಸಾವಿರ ರೂ. ಕಡಿಮೆ ತೆಗೆದುಕೊಳ್ಳಬೇಕು ಎನ್ನುವ ಪದ್ಧತಿ ಇತ್ತು. ಇಂದು ಮೆಣಸಿನಕಾಯಿ 28 ಸಾವಿರ ರೂ. ಬೆಲೆ ಇದ್ದರೇ ಅವರು ಇಂದು 13 ಸಾವಿರ ರೂಪಾಯಿಗೆ ತೆಗೆದುಕೊಳ್ಳುತ್ತಿದ್ದಾರೆ. ರೈತರ ಆ ಕಂಪನಿಗೆ ಮಾರಾಟ ಮಾಡದೆ ನೇರವಾಗಿ ಜನರಿಗೆ ಮಾರುವ ಪರಿಸ್ಥಿತಿ ಬಂದಿದೆ ಎಂದರು.