ಬಳ್ಳಾರಿ/ ಕುಷ್ಟಗಿ: ತೋರಣಗಲ್ಲು ಬಳಿಯ ಜಿಂದಾಲ್ ಉಕ್ಕು ಕಾರ್ಖಾನೆಗೆ ಆಲಮಟ್ಟಿ ಜಲಾಶಯದಿಂದ ನೀರು ಪೂರೈಸುವ ಮುಖ್ಯ ಕೊಳವೆ ವಾಲ್ನಿಂದ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆಯಾಗಿ ರೈತರ ಜಮೀನಿನ ಮಣ್ಣು ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ತಡರಾತ್ರಿ ಕಂದಕೂರ ಬಳಿಯ ಎಸ್. ಡಿ. ಪಾಟೀಲ್ ಜಮೀನಿನಲ್ಲಿ ಜಿಂದಾಲ್ ಪೈಪ್ಲೈನ್ ವಾಲ್ನಲ್ಲಿ ಬಿರುಕಿನಂದ ಅಪಾರ ಪ್ರಮಾಣದಲ್ಲಿ ನೀರು ಹಳ್ಳದಂತೆ ಹರಿದಿದೆ. ಆಲಮಟ್ಟಿ ಜಲಾಶಯದಿಂದ ಕುಷ್ಟಗಿ ಮೂಲಕ ತೋರಣಗಲ್ಲವರೆಗೂ ಸುಮಾರು 6-7 ಅಡಿ ಒಳಾಂತರ ವ್ಯಾಸದ ಬೃಹತ್ ಪೈಪ್ಗಳನ್ನು ಕೃಷಿ ಜಮೀನುಗಳಲ್ಲಿ ಅಳವಡಿಸಲಾಗಿದೆ. ನೀರಿನ ಒತ್ತಡಕ್ಕೆ ವಾಲ್ನಲ್ಲಿ ಬಿರುಕು ಕಾಣಿಸಿಕೊಂಡು ಪದೇ ಪದೆ ಅಪಾರ ಪ್ರಮಾಣ ನೀರು ಹರಿದು ಜಮೀನು ಹಾಳಗುತ್ತಿರುವುದರಿಂದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಲ ತಿಂಗಳ ಹಿಂದೆಯೂ ಇದೆ ರೀತಿಯ ಘಟನೆ ನಡೆದಿತ್ತು. ಸಂಬಂಧಿಸಿದ ಜಿಂದಾಲ್ ಕಂಪನಿಯವರು ವಾಲ್ ದುರಸ್ತಿ ಮಾಡುತ್ತಿದ್ದಾರೆ. ಆದರೆ, ಹಾಳಾದ ಜಮೀನಿಗೆ ಹಾಗೂ ಬೆಳೆಗೆ ಪರಿಹಾರ ನೀಡಿಲ್ಲ.