ಬಳ್ಳಾರಿ: ಏ. 19 ಮತು 20ರಂದು ಪ್ರಾರಂಭವಾಗಬೇಕಿದ್ದ ವಿಎಸ್‍ಕೆ ವಿವಿಯ 2020-21ನೇ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ 1ನೇ, 3ನೇ ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಸಾರಿಗೆ ನೌಕರರ ಮಷ್ಕರದಿಂದ ಮೂಂದೂಡಲಾಗಿದೆ ಎಂದು ವಿವಿಯ ಮೌಲ್ಯಮಾಪನ ಕುಲಸಚಿವರು ಮಾಹಿತಿ ನೀಡಿದ್ದಾರೆ.

ಪರೀಕ್ಷೆಯ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಪುನಃ ಪರೀಕ್ಷೆಗಳನ್ನು ಯಾವುದೇ ಕ್ಷಣದಲ್ಲಾದರೂ ಆಯೋಜಿಸಬಹುದು. ವಿದ್ಯಾರ್ಥಿಗಳು ಪರೀಕ್ಷೆಗೆ ಸನ್ನದ್ಧರಾಗಿರುವಂತೆ ಅವರು ಸೂಚಿಸಿದ್ದಾರೆ.
ಪರೀಕ್ಷೆ ಕುರಿತು ಯಾವುದೇ ನಕಲಿ ಸುತ್ತೋಲೆಗಳಂದ ವಿದ್ಯಾರ್ಥಿಗಳು, ಪಾಲಕರು ಹಾಗೂ ವಿದ್ಯಾಲಯಗಳು ವಿಚಲಿತರಾಗದಿರುವಂತೆ ತಿಳಿಸಿದ್ದಾರೆ.