ಹೊಸಪೇಟೆ : ವಿಶ್ವವಿಖ್ಯಾತ ಹಂಪಿಗೆ ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಭೇಟಿ ನೀಡಿದರು.
ಮೊದಲು ವಿರೂಪಾಕ್ಷೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ಬಳಿಕ ಪಂಪಾಂಬಿಕೆ, ಭುವನೇಶ್ವರಿ ದೇವಿಯ ದರ್ಶನ ಪಡೆದರು. ನಂತರ ಯಂತ್ರೋದ್ಧಾರಕ ದೇಗುಲ, ಕೋದಂಡರಾಮಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಆ ನಂತರ ಹಂಪಿಯ ಕಡಲೆಕಾಳು, ಸಾಸುವೆ ಕಾಳು, ಉಗ್ರನರಸಿಂಹ, ಮಹಾನವಮಿದಿಬ್ಬ, ರಾಣಿಸ್ನಾನಗೃಹ, ಕಮಲಮಹಲ್ ಸೇರಿ ನಾನಾ ಸ್ಮಾರಕಗಳನ್ನು ಕಣ್ತುಂಬಿಕೊಂಡರು.