ETV Bharat / state

ಹೊಸಪೇಟೆಗೆ ಬಂದಿಳಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ದಂಪತಿ: ಬಿಗಿ ಬಂದೋಬಸ್ತ್​.. - Vice president venkaiah naidu tour news

ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಹಾಗೂ ಅವರ ಪತ್ನಿ ಎಂ. ಉಷಾ ಅವರು ರಸ್ತೆ ಮಾರ್ಗವಾಗಿ ತುಂಗಭದ್ರಾ ಜಲಾಶಯಕ್ಕೆ ತೆರಳುತ್ತಿರುವುದನ್ನು ರಸ್ತೆಯುದ್ದಕ್ಕೂ ಸಾರ್ವಜನಿಕರು‌ ನಿಂತು ವೀಕ್ಷಿಸಿದರು. ಈ ವೇಳೆ ಅನೇಕರು ವಿಡಿಯೋ ಹಾಗೂ ಕೆಲವರು ಫೋಟೊ ಕ್ಲಿಕ್ಕಿಸಿಕೊಂಡರು.

vice-president-venkaiah-naidu-visit-hospet
ಹೊಸಪೇಟೆಗೆ ಬಂದಿಳಿದ ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ದಂಪತಿ
author img

By

Published : Aug 20, 2021, 6:06 PM IST

Updated : Aug 20, 2021, 7:08 PM IST

ಹೊಸಪೇಟೆ(ವಿಜಯನಗರ): ತುಂಗಭದ್ರಾ ಜಲಾಶಯ, ಹಂಪಿ ವಿಶ್ವ ಪಾರಂಪರಿಕ ತಾಣಗಳನ್ನು ವೀಕ್ಷಿಸಲು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಹಾಗೂ ಪತ್ನಿ ಎಂ. ಉಷಾ ಅವರು ಪ್ರವಾಸ ಕೈಗೊಂಡಿದ್ದಾರೆ.

ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆಯ ಮುನ್ಸಿಪಲ್ ಮೈದಾನಕ್ಕೆ ವಾಯುಪಡೆ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಶುಕ್ರವಾರ ಸಂಜೆ ಬಂದಿಳಿದರು. ಈ ವೇಳೆ, ಪರಿಸರ, ಜೀವಿಶಾಸ್ತ್ರ, ಪ್ರವಾಸೋದ್ಯಮ ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಹಾಗೂ ಕೊಪ್ಪಳ‌ ಸಂಸದ ಕರಡಿ ಸಂಗಣ್ಣ ಸ್ವಾಗತಿಸಿದರು.

ನಂತರ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಹಾಗೂ ಅವರ ಪತ್ನಿ ಎಂ. ಉಷಾ ಅವರು ತುಂಗಭದ್ರಾ ಜಲಾಶಯದ ಸೌಂದರ್ಯ ಮತ್ತು ಜಲಧಾರೆ ಕಣ್ತುಂಬಿಕೊಳ್ಳಲು ತೆರಳಿದರು. ಗಣ್ಯರ ಭೇಟಿ ಹಿನ್ನೆಲೆ ನಗರದಾದ್ಯಂತ ಬೀಗಿಬಂದೋಬಸ್ತ್ ಕೈಗೊಳ್ಳಲಾಗಿತ್ತು.

ದಂಪತಿಗಳು ರಸ್ತೆ ಮಾರ್ಗವಾಗಿ ತುಂಗಭದ್ರಾ ಜಲಾಶಯಕ್ಕೆ ತೆರಳುತ್ತಿರುವುದನ್ನು ರಸ್ತೆಯುದ್ದಕ್ಕೂ ಸಾರ್ವಜನಿಕರು‌ ನಿಂತು ವೀಕ್ಷಿಸಿದರು ಮತ್ತು ಅನೇಕರು ವಿಡಿಯೋ ಹಾಗೂ ಕೆಲವರು ಫೋಟೊ ಕ್ಲಿಕ್ಕಿಸಿಕೊಂಡರು.

ಕಲಬುರಗಿ ವಿಭಾಗೀಯ ಪ್ರಾದೇಶಿಕ ಆಯುಕ್ತ ಎನ್. ವಿ ಪ್ರಸಾದ್, ಐಜಿಪಿ ಮನಿಷ್ ಖರ್ಬಿಕರ್, ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಅಪರ ಜಿಲ್ಲಾಧಿಕಾರಿ ಪಿ.ಎಸ್ ಮಂಜುನಾಥ, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ. ಎನ್ ಲಾವಣ್ಯ ಮತ್ತಿತರರು ಇದ್ದರು.

ಓದಿ: ಸಿಎಂ ಭೇಟಿಯಾದ ಶೋಭಾ ಕರಂದ್ಲಾಜೆ : ಕೃಷಿ ಕ್ಷೇತ್ರದ ಅಭಿವೃದ್ಧಿ ಕುರಿತು ಸಮಾಲೋಚನೆ

Last Updated : Aug 20, 2021, 7:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.