ETV Bharat / state

ಅನಧಿಕೃತ ಯೂರಿಯಾ ಸಂಗ್ರಹಿಸಿದ್ದ ಸಗಟು ವ್ಯಾಪಾರ ಮಳಿಗೆಗಳ ಲೈಸೆನ್ಸ್ ರದ್ದು - ಎಸ್‌ ಎಸ್ ನಕುಲ್‌

author img

By

Published : Sep 8, 2020, 4:28 PM IST

ಕೋರಮಂಡಲಂನಿಂದ 2800 ಮೆಟ್ರಿಕ್ ಟನ್, ಐಪಿಎಲ್​ನಿಂದ 1580 ಮೆಟ್ರಿಕ್ ಟನ್ ಹಾಗೂ ಆರ್​ಸಿಎಫ್​ನಿಂದ 2100 ಮೆಟ್ರಿಕ್ ಟನ್​ನಷ್ಟು ಯೂರಿಯಾ ರಸಗೊಬ್ಬರವನ್ನ ತರಿಸಲಾಗಿದೆ..

ಅನಧಿಕೃತ ಯೂರಿಯಾ ರಸಗೊಬ್ಬರ ದಾಸ್ತಾನು
ಅನಧಿಕೃತ ಯೂರಿಯಾ ರಸಗೊಬ್ಬರ ದಾಸ್ತಾನು

ಬಳ್ಳಾರಿ : ಯೂರಿಯಾ ರಸಗೊಬ್ಬರದ ಕೊರತೆ ಎದುರಾಗಿದ್ದ ಹಿನ್ನೆಲೆ ಕ್ರಮಕೈಗೊಂಡ ಜಿಲ್ಲಾಡಳಿತ ಸಕಾಲದಲ್ಲಿ ರೈತರಿಗೆ ರಸಗೊಬ್ಬರ ಪೂರೈಕೆ ಮಾಡಿ ಸಮಸ್ಯೆ ನಿವಾರಣೆ ಮಾಡಿದೆ.

ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೇ ಯೂರಿಯಾ ರಸಗೊಬ್ಬರದ ಕೊರತೆ ಇತ್ತು. ‌ಜಿಲ್ಲೆಯ ನಾನಾ ತಾಲೂಕಿನ ಸಗಟು ವ್ಯಾಪಾರ ಮಳಿಗೆಗಳಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟ ಯೂರಿಯಾ ರಸಗೊಬ್ಬರ ದಾಸ್ತಾನು ಕಂಡು ಬಂದಿದೆ. ಆ ಮಳಿಗೆಗಳ ಮೇಲೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಅವುಗಳ ಲೈಸೆನ್ಸ್ ರದ್ದು ಪಡಿಸಿದ್ದಾರೆ.

ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಮಾತು

ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್, ಯೂರಿಯಾ ರಸಗೊಬ್ಬರದ ಕೃತಕ ಅಭಾವ ಎದುರಾಗಿತ್ತು.‌ ಅದನ್ನ ಮನಗಂಡ ಜಿಲ್ಲಾಡಳಿತ ಅಗತ್ಯಕ್ಕೆ ತಕ್ಕಂತೆ ಯೂರಿಯಾ ರಸಗೊಬ್ಬರ ದಾಸ್ತಾನಿಗೆ ಮುಂದಾಗಿದೆ.

ಕೋರಮಂಡಲಂನಿಂದ 2800 ಮೆಟ್ರಿಕ್ ಟನ್, ಐಪಿಎಲ್​ನಿಂದ 1580 ಮೆಟ್ರಿಕ್ ಟನ್ ಹಾಗೂ ಆರ್​ಸಿಎಫ್​ನಿಂದ 2100 ಮೆಟ್ರಿಕ್ ಟನ್​ನಷ್ಟು ಯೂರಿಯಾ ರಸಗೊಬ್ಬರವನ್ನ ತರಿಸಲಾಗಿದೆ. ಹೀಗಾಗಿ, ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಕೊರತೆಯೇನಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.