ಬಳ್ಳಾರಿ: ದುಬೈನಿಂದ ಬಳ್ಳಾರಿಗೆ ಬಂದಿರುವ ಇಬ್ಬರಲ್ಲಿ ದಕ್ಷಿಣ ಆಫ್ರಿಕಾ ವೈರಸ್ ಪತ್ತೆಯಾಗಿದೆ.
ಫೆಬ್ರುವರಿ 17 ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೊನಾ ಟೆಸ್ಟ್ ಮಾಡಿದಾಗ ನೆಗೆಟಿವ್ ವರದಿ ಬಂದಿತ್ತು. ಬಳಿಕ ಫೆ.18 ರಂದು ಬಳ್ಳಾರಿಗೆ ಬಂದಿದ್ದ ಅಣ್ಣ-ತಂಗಿ ಇಬ್ಬರಲ್ಲಿ ಒಬ್ಬರಿಗೆ ಫೆ.20 ರಂದು ಜ್ವರ ಕಾಣಿಸಿಕೊಂಡಿತ್ತು. ಆಗ ಇಬ್ಬರಿಗೂ ಪುನಃ ಕೋವಿಡ್ ಟೆಸ್ಟ್ ಮಾಡಿಸಿದಾಗ ಸೋಂಕು ದೃಢಪಟ್ಟಿದೆ.
ಬಳಿಕ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕೊರೊನಾ ಟೆಸ್ಟ್ ಮಾಡಿದ್ದು, ಆಗ ಮತ್ತೊಬ್ಬರಿಗೆ ಕೊರೊನಾ ಇರುವುದು ಗೊತ್ತಾಗಿದೆ. ಇಬ್ಬರಿಗೂ ತಗುಲಿರುವುದು ದಕ್ಷಿಣ ಆಫ್ರಿಕಾ ವೈರಸ್ ಎಂಬುದು ದೃಢಪಟ್ಟಿದೆ.
ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ ಲ್ಯಾಬ್ನಲ್ಲಿ ಟೆಸ್ಟ್ ಮಾಡಿಸಿದಾಗ ಕೊರೊನಾ ಖಾತ್ರಿಯಾಗಿದೆ. ಇಬ್ಬರಿಗೂ ಬಳ್ಳಾರಿಯ ಟ್ರಾಮಾಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.