ಬಳ್ಳಾರಿ: ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿಯಲ್ಲಿ ನಡೆದಿದೆ. ಸಿರಿಗೇರಿ ಗ್ರಾಮದ ಮೌನೇಶ್ (9), ರವಿ (7) ಮೃತ ಬಾಲಕರು. ಕವಳೆ ಹಣ್ಣು ಕೀಳಲು ಹೋದಾಗ ಘಟನೆ ನಡೆದಿದೆ. ಬಾಲಕರಿಬ್ಬರು ಗ್ರಾಮದ ತಿಪ್ಪೇಶ್ ಎನ್ನುವವರ ಮಕ್ಕಳು ಎಂಬುದು ತಿಳಿದುಬಂದಿದೆ.
![ravi](https://etvbharatimages.akamaized.net/etvbharat/prod-images/12962613_thum.jpg)
ಸಂಬಂಧಿಕರ ಸಂಸ್ಕಾರಕ್ಕೆ ಹೋಗಿ ಮನೆಗೆ ಬಂದಿದ್ದ ತಂದೆ ತಿಪ್ಪೇಶ್ಗೆ ಮಕ್ಕಳ ಶವಕಂಡು ದುಃಖ ಮಡುಗಟ್ಟಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![ravi](https://etvbharatimages.akamaized.net/etvbharat/prod-images/12962613_thu.jpg)
ಓದಿ: ಬೆಳಕು ಕಾಣದ ಇವರ ಬದುಕೇ 'ಬುಡ್ಡಿದೀಪ'.. 'ಪವರ್'ಫುಲ್ ಸಚಿವರ ತವರಿನಲ್ಲೇ ಕತ್ತಲು..