ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಯ ಎರಡು ಶಕ್ತಿ ಕೇಂದ್ರಗಳಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ.
ಜಿಂದಾಲ್ ಉಕ್ಕು ಕಾರ್ಖಾನೆ ಆವರಣದಲ್ಲಿರುವ ಶಂಕರಗುಡ್ಡ ಹಾಗೂ ವಿದ್ಯಾನಗರ ಶಕ್ತಿ ಕೇಂದ್ರಗಳಲ್ಲಿ ಗ್ರಾಮೀಣ ಭಾಗದ ಎಂಟನೇ ತರಗತಿ, ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪಾಸಾದವರಿಗೆ ಇಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಹಾಗೆಯೇ ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ನೀಡಿರುವವರ ಮಕ್ಕಳಿಗೂ ಇಲ್ಲಿ ತರಬೇತಿ ನೀಡಲಾಗುತ್ತಿದೆ.
2008ರಲ್ಲಿ ಆರಂಭವಾದ ಓಂಪ್ರಕಾಶ ಜಿಂದಾಲ್ ಸೆಂಟರ್ನಲ್ಲಿ ಒಟ್ಟು 6 ವಿಭಾಗಗಳಿವೆ. ಎನ್ಟಿಟಿಎಫ್ ಪ್ಲಾಂಟ್ ಆಪರೇಷನ್ ಆ್ಯಂಡ್ ಮೆಂಟೇನೆನ್ಸ್ ಕೇಂದ್ರದಲ್ಲಿ ಎಲೆಕ್ಟ್ರಿಕ್, ಮೋಟರ್ ವೆಲ್ಡಿಂಗ್, ಮಷಿನ್ ಮೆಂಟೇನೆನ್ಸ್, ಬೇಸಿಕ್ ಫಿಟ್ಟಿಂಗ್ ಆ್ಯಂಡ್ ಮೆಂಟೇನೆನ್ಸ್ಗಳನ್ನು ಹೇಳಿಕೊಡಲಾಗುತ್ತದೆ. ಅಷ್ಟೇ ಅಲ್ಲದೆ, ಬ್ಯೂಟಿಷಿಯನ್, ಬಿಎಸ್ಸಿ ನರ್ಸಿಂಗ್, ಪೋಸ್ಟ್ ಡಿಪ್ಲೋಮಾ ಇಂಡಸ್ಟ್ರಿಯಲ್ ಸೇಫ್ಟಿ, ಟೈಲರಿಂಗ್ ಸೇರಿದಂತೆ ಇನ್ನಿತರೆ ಕೋರ್ಸುಗಳನ್ನು ಹೇಳಿಕೊಡಲಾಗ್ತಿದೆ.