ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಹಾಗೂ ಕಂಪ್ಲಿ ಪುರಸಭೆಗೆ ನಾಳೆ ಮತದಾನ ನಡೆಯಲಿದ್ದು, 42 ವಾರ್ಡ್ಗಳಲ್ಲಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಕೂಡ್ಲಿಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 20 ವಾರ್ಡ್ಗಳಿದ್ದು, ಆ ಪೈಕಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ತಲಾ 18 ಹಾಗೂ 10 ಜನ ಪಕ್ಷೇತರರು ಸೇರಿ 64 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ನಾಳೆ ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.
ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ 5ನೇ ವಾರ್ಡಿನ ಹುಲಿಕುಂಟೆಪ್ಪ, 7ನೇ ವಾರ್ಡಿನ ಕೋರಿ ಬಸವರಾಜ, 8ನೇ ವಾರ್ಡಿನ ಎಚ್. ಪ್ರಕಾಶ್ ಹಾಗೂ 17ನೇ ವಾರ್ಡಿನ ಡಿ.ಸುಜಾತಾ ನಾಮಪತ್ರ ವಾಪಸ್ಸು ಪಡೆದಿದ್ದಾರೆ. 18ನೇ ವಾರ್ಡಿನಿಂದ ಏಕೈಕ ನಾಮಪತ್ರ ಸಲ್ಲಿಸಿದ್ದ ಪಕ್ಷೇತರ ಅಭ್ಯರ್ಥಿ ವಿ.ಸರಸ್ಪತಿ ಅವರನ್ನು ಅವಿರೋಧ ಆಯ್ಕೆಗೊಳಿಸಿ ಚುನಾವಣಾಧಿಕಾರಿಗಳು ಘೋಷಣೆ ಮಾಡಿದ್ದಾರೆ.
ಕೂಡ್ಲಿಗಿ ಪಟ್ಟಣ ಪಂಚಾಯಿತಿ ವಿವರ:
* ಪುರುಷರು: 10, 263
* ಮಹಿಳೆಯರು: 10, 968
* ಇತರರು: 02
* 20 ಮತಗಟ್ಟೆಗಳು.
* 20ನೇ ವಾರ್ಡ್ನಲ್ಲಿ ಎರಡು ಮತಗಟ್ಟೆ ಸ್ಥಾಪನೆ
ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್ಗಳಿದ್ದು, ಆ ಪೈಕಿ ಕಾಂಗ್ರೆಸ್ 23, ಬಿಜೆಪಿ 23, ಪಕ್ಷೇತರ 18, ಬಿಎಸ್‌ಪಿ 3, ಜೆಡಿಎಸ್ 1 ಮತ್ತು ಜೆಡಿಯು 1 ಸೇರಿದಂತೆ 69 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಕಂಪ್ಲಿ ಪುರಸಭೆ ವಿವರ:
* ಪುರುಷರು: 16,740
* ಮಹಿಳೆಯರು: 17,005
* ಇತರರು: 06
ಒಟ್ಟಾರೆಯಾಗಿ 23 ವಾರ್ಡ್ಗಳು, 35 ಮತಗಟ್ಟೆಗಳು,7 ಸೂಕ್ಷ್ಮ ಮತಗಟ್ಟೆಗಳು ಸೇರಿದಂತೆ 2 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.